12:16 AM Wednesday 15 - October 2025

ಕೋವಿಡ್ ಲಸಿಕೆ ಸಾವು ತಪ್ಪಿಸುತ್ತದೆಯೇ ಹೊರತು ಸೋಂಕು ಬರುವುದನ್ನಲ್ಲ: ಸಚಿವ ಡಾ. ಸುಧಾಕರ್‌

sudhakar
19/01/2022

ಬೆಂಗಳೂರು: ಕೋವಿಡ್ ಲಸಿಕೆ ಸೋಂಕಿನ ತೀವ್ರತೆ ಹಾಗೂ ಸಂಭವಿಸಬಹುದಾದ ಸಾವು ತಪ್ಪಿಸಬಹುದೇ ಹೊರತು ಸೋಂಕು ಬರುವುದನ್ನು ತಪ್ಪಿಸಲು ಆಗುವುದಿಲ್ಲ. ಹೀಗಾಗಿ ಜನರು ಇದನ್ನು ತಪ್ಪು ತಿಳಿದುಕೊಳ್ಳಬಾರದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಲಸಿಕೆ ಹಾಕಿಸಿಕೊಳ್ಳುವುದರಿಂದ ಖಂಡಿತವಾಗಿ ನಿಮ್ಮ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಮೂರನೇ ಡೋಸ್ ತೆಗೆದುಕೊಳ್ಳಲು ಯಾರಿಗೆ ಅರ್ಹತೆ ಇದೆಯೋ ಅವರು ದಯವಿಟ್ಟು ಲಸಿಕೆ ಪಡೆದುಕೊಂಡು ಅಪಾಯದಿಂದ ಪಾರಾಗಿ ಎಂದು ಮನವಿ ಮಾಡಿದ್ದಾರೆ. 15-17 ವರ್ಷ ವಯಸ್ಸಿನ ಮಕ್ಕಳ ಲಸಿಕೆ ಶೇ. 60ರಷ್ಟು ಆಗಿದ್ದು, ಆದಷ್ಟು ಬೇಗ ನಿಮ್ಮ‌ ಮಕ್ಕಳಿಗೆ ಲಸಿಕೆ ಹಾಕಿಸಿ ಅಂತ  ಪೋಷಕರಲ್ಲೂ ಮನವಿ ಮಾಡುತ್ತೇನೆ ಎಂದು ಹೇಳಿದರು.

ವೀಕೆಂಡ್ ಕರ್ಫ್ಯೂ ಕುರಿತು ಪ್ರತಿಕ್ರಿಯಿಸಿರುವ ಅವರು, ಎಲ್ಲರ ಅಭಿಪ್ರಾಯಗಳನ್ನ ಸಂಗ್ರಹ ಮಾಡುತ್ತಿದ್ದೇವೆ. ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿಯಿಂದ ಶುರುವಾಗುತ್ತೆ, ಹೀಗಾಗಿ ಅಂದು ಬೆಳಗ್ಗೆಯೇ ಸಿಎಂ ಸಭೆ ಕರೆದಿದ್ದು ಇದರ ಸಾಧಕ ಬಾಧಕ ಚರ್ಚೆ ಮಾಡುತ್ತಾರೆ. ಎರಡು ಮೂರು ದಿನದ ಸೋಂಕಿನ ಪ್ರಭಾವ ಯಾವ ರೀತಿ ಆಗ್ತಿದೆ ಎಂಬುದು ತಿಳಿಯಲಿದೆ. ಆ ಪ್ರಕಾರ ಜನಪರ ನಿರ್ಣಯ ತೆಗೆದುಕೊಳ್ಳಲಿದ್ದೇವೆ ಎಂದರು.

ಕೋವಿಡ್ ಸೋಂಕಿನ ಕುರಿತು ವೈದ್ಯರು ನೀಡಿರುವ ಹೇಳಿಕೆ ಕುರಿತು ಮಾತಾನಾಡಿದ ಸಚಿವರು, ವೈದ್ಯರಿಂದ ಇಂತಹ ಹೇಳಿಕೆಗಳನ್ನ ನಿರೀಕ್ಷೆ ಮಾಡಿರಲಿಲ್ಲ. ಕೆಲವರು ಪ್ರಚೋದನೆ ಒಳಗಾಗುವ ಮಾತುಗಳನ್ನ ಹೇಳುತ್ತಿದ್ದಾರೆ. ಹೀಗಾಗಿಯೇ ಸರ್ಕಾರದ ಅಧಿಕೃತ ವೈದ್ಯರು ಅಷ್ಟೇ ಹೇಳಿಕೆ ಕೊಡಬೇಕು ಎಂದು ಆದೇಶ ಹೊರಡಿಸಲಾಗಿದೆ‌.‌ ಬೆಂಗಳೂರಿನಲ್ಲಿ 14 ತಜ್ಞ ವೈದ್ಯರು ಅಷ್ಟೇ ಮಾತನಾಡಬೇಕು. ಇತರರು ಯಾರು ಮಾತನಾಡುವ ಹಾಗೇ ಇಲ್ಲ ಅಂತ ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭಾರೀ ಪ್ರಮಾಣದ ಹಿಮಕುಸಿತ; ಭಾರತೀಯ ಸೇನೆಯಿಂದ 30 ನಾಗರಿಕರ ರಕ್ಷಣೆನಾಪತ್ತೆಯಾಗಿದ್ದ ನಟಿ ರೈಮಾ ಇಸ್ಲಾಂ ಶಿಮು ಅವರ ಮೃತದೇಹ ಗೋಣಿಚೀಲದಲ್ಲಿ ಪತ್ತೆ 

ಭಾರೀ ಪ್ರಮಾಣದ ಹಿಮಕುಸಿತ; ಭಾರತೀಯ ಸೇನೆಯಿಂದ 30 ನಾಗರಿಕರ ರಕ್ಷಣೆಐಎನ್‌ ಎಸ್ ರಣವೀರ್ ಯುದ್ಧನೌಕೆಯಲ್ಲಿ ಸ್ಫೋಟ: ಮೂವರು ನೌಕಾ ಸಿಬ್ಬಂದಿ ಸಾವು

ಚಿಕನ್ ಚಿಲ್ಲಿ, ಬಿರಿಯಾನಿ ತಿನ್ನುವ ಸ್ಪರ್ಧೆ: 40 ಮಂದಿಯ ವಿರುದ್ಧ ಕೇಸ್

!ಕೊವಿಡ್ ಗೆ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಬಲಿ

ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಹೈಕೋಟ್‌ನಿಂದ ಆರೋಪಿಯ ಜಾಮೀನು ಅರ್ಜಿ ವಜಾ 

 

ಇತ್ತೀಚಿನ ಸುದ್ದಿ

Exit mobile version