3:49 PM Saturday 31 - January 2026

ಚುನಾವಣೆ ವೇಳೆಯಲ್ಲೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆಡಿಯೋ ಬಾಂಬ್: ಅಮಿತ್ ಶಾ ಬಗ್ಗೆ ಹೇಳಿದ್ದೇನು?

cp yogeshwar
14/01/2023

ರಾಮನಗರ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಅವರದ್ದು ಎನ್ನಲಾದ ಸ್ಫೋಟಕ ಆಡಿಯೋವೊಂದು ಇದೀಗ ಸದ್ದು ಮಾಡುತ್ತಿದ್ದು, ಕನ್ನಡ ಸುದ್ದಿವಾಹಿನಿಯೊಂದು ಈ ಬಗ್ಗೆ ವರದಿ ಮಾಡಿದೆ.

ಆಡಿಯೋದಲ್ಲಿ  “ಅಮಿತ್ ಶಾ ಒಂಥರಾ ರೌಸಂ ಕಣಯ್ಯ” ಹೊಂದಾಣಿಕೆ ರಾಜಕಾರಣ ಬೇಡ ಅಂತಾರೆ, ಹೊಂದಾಣಿಕೆ ತಾಯಿಗೆ ದ್ರೋಹ ಮಾಡಿದಂತೆ ಅಂತಾರೆ, ಪಾರ್ಟಿ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅಷ್ಟೆ ಅವರ ಕಥೆ ಎಂದು ಆಡಿಯೋದಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.

ತಮ್ಮದೇ ಪಕ್ಷದ ಆರ್.ಅಶೋಕ್, ಅಶ್ವಥ್ ನಾರಾಯಣ್ ಅವರಿಗೂ ಸವಾಲು ಹಾಕಿ, ನಾನು  ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡುತ್ತೇನೆ, ಅಶ್ವಥ್ ನಾರಾಯಣ್ ಡಿ.ಕೆ.ಶಿವಕುಮಾರ್ ವಿರುದ್ಧ, ಆರ್.ಅಶೋಕ್ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ ಎಂದು ಹೇಳಲಾಗಿದೆ.

‘ಇನ್ನೂ ಜೆಡಿಎಸ್ ನ 30 ಅಭ್ಯರ್ಥಿಗಳು ಈ ಬಾರಿ ಸೋಲುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಗೆದ್ದರಷ್ಟೇ ಸಿಎಂ ಆಗ್ತಾರೆ, ನಾವು ಚುನಾವಣೆಗಿಂತ ಮೊದಲು ಆಪರೇಷನ್ ಕಮಲ ಮಾಡುವುದಿಲ್ಲ, ಚುನಾವಣೆಗಿಂತ ಮುಂಚಿತವಾಗಿಯೇ ಮಾಡುತ್ತೇವೆ ಎಂದು ಆಡಿಯೋ ಬಾಂಬ್ ನಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version