ನೋಟೀಸ್ ನೀಡಲು ಬಂದ ಪೊಲೀಸರಿಗೆ ಬೆಂಬಲಿಗರ ಜೊತೆ ಸೇರಿ ತರಾಟೆಗೆತ್ತಿಕೊಂಡ ಸಿ.ಟಿ.ರವಿ

c.t.ravi
26/07/2026

ಚಿಕ್ಕಮಗಳೂರು:  ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ವಿರುದ್ಧ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ, ನಗರ ಠಾಣೆ ಪೊಲೀಸರು ತನಿಖೆಗೆ ಹಾಜರಾಗುವಂತೆ ನೋಟೀಸ್ ನೀಡಲು ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಆದರೆ, ನೋಟೀಸ್ ಸ್ವೀಕರಿಸುವ ಮುನ್ನ ಎಫ್.ಐ.ಆರ್ (FIR) ಪ್ರತಿ ನೀಡುವಂತೆ ಸಿ.ಟಿ. ರವಿ ಪಟ್ಟು ಹಿಡಿದ ಘಟನೆ ನಡೆದಿದೆ.

ನಗರದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲು ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಸಿ.ಟಿ. ರವಿ ಅವರ ಮನೆಗೆ ಆಗಮಿಸಿದ್ದರು. ಈ ವೇಳೆ ಪೊಲೀಸರ ವಿರುದ್ಧ ಸಿ.ಟಿ.ರವಿ ಮತ್ತು ಬೆಂಬಲಿಗರು ಪೊಲೀಸ್ ಅಧಿಕಾರಿಯನ್ನು ತರಾಟೆಗೆತ್ತಿಕೊಂಡರು.


 “ನನ್ನ ವಿರುದ್ಧ ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೀರಾ?” ಪ್ರಕರಣದ ತನಿಖಾಧಿಕಾರಿಯನ್ನು (IO) ಬಿಟ್ಟು ಬೇರೆ ಪೊಲೀಸರು ನೋಟೀಸ್ ನೀಡಲು ಬಂದಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು. “ನನಗೆ ನೋಟೀಸ್ ನೀಡುವ ಮೊದಲು ಎಫ್.ಐ.ಆರ್ ಪ್ರತಿ ನೀಡಿ, ಆಮೇಲೆ ನೋಟೀಸ್ ನೀಡಲು ಬನ್ನಿ” ಎಂದು  ಹೇಳಿದರು.


“ಪ್ರತಿಯೊಬ್ಬರ ಮನೆಗೂ ಇದೇ ರೀತಿ ಹೋಗುತ್ತೀರಾ?” ಎಂದು ಪೊಲೀಸರ ಕಾರ್ಯಾಚರಣೆಯ ವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದರು.   ಪೊಲೀಸರು ನೋಟೀಸ್ ನೀಡಲು ಬಂದ ವೇಳೆ ಸಿ.ಟಿ. ರವಿ ಬೆಂಬಲಿಗರು ನೆರೆದು ಪೊಲೀಸರ ಜೊತೆಗೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version