7:56 AM Saturday 18 - October 2025

ದಲಿತ ಮಹಿಳೆಯ ಮೇಲೆ ‘ಜೀನಿ’ ಕಂಪೆನಿ ಮಾಲೀಕನಿಂದ ಲೈಂಗಿಕ ಕಿರುಕುಳ: ದೂರು ದಾಖಲು

jeeni
25/04/2025

ತುಮಕೂರು:  ವಾಲ್ಮೀಕಿ ಸಮುದಾಯದ ಮಹಿಳೆಯೊಬ್ಬರಿಗೆ  ಜೀನಿ ಕಂಪನಿ ಮಾಲೀಕ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಕಂಪನಿ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆ ಎಫ್ ಐಅರ್ ದಾಖಲು ಆಗಿದ್ದು, ಜೀನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಕಿರುಕುಳ ನೀಡಿರೋ ಆರೋಪ ಕೇಳಿಬಂದಿದೆ.

ಕಳೆದ 10 ತಿಂಗಳಿಂದ ಜೀನಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸಂತ್ರಸ್ತ ಯುವತಿಗೆ  ಕೆಲಸದ ಸಮಯದಲ್ಲಿ ಮೈ ಕೈ ಮುಟ್ಟುವುದು, ಕಣ್ಣು ಹೊಡೆಯುವುದು ಮಾಡುತ್ತಿದ್ದನು. ಇದರಿಂದ ನೊಂದ ಯುವತಿ ಈ ರೀತಿ ಕಿರುಕುಳ ನೀಡಬೇಡಿ, ನಾನು ಅಂತಹವಳಲ್ಲ, ಪ್ರೀತಿಸಿ ಮದುವೆಯಾದವಳು ಎಂದು ಅಂಗಲಾಚಿದ್ದರು. ಆದರೂ ಏಪ್ರಿಲ್ 19ರಂದು ಮಧ್ಯಾಹ್ನದ ನಂತರ ಕೆಲಸದ ಸ್ಥಳದಲ್ಲಿನ ಶೆಡ್ ಗೆ ಬಾ ಸ್ಪಲ್ಪ ಕೆಲಸ ಇದೆ ಎಂದು ಕರೆದುಕೊಂಡು ಹೋಗಿ  ಕೈ ಹಿಡಿದು ಎಳೆದಾಡಿ, ಮುತ್ತುಕೊಡಲು ಯತ್ನಿಸಿ, ತಬ್ಬಿಕೊಂಡು ಖಾಸಗಿ ಅಂಗಗಳನ್ನು ಸ್ಪರ್ಶಿಸಿ, ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಲ್ಲದೇ ನನಗೆ ಸಹಕರಿಸದಿದ್ದರೆ ಕೆಲಸದಿಂದ ತೆಗೆದು ಹಾಕುತ್ತೇನೆ, ಸಹಕರಿಸಿದರೆ ರಾಣಿಯಂತೆ ನೋಡಿಕೊಳ್ಳುತ್ತೇನೆ ಎಂದು ಆಮಿಷ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಸಂಬಂಧ ಯಾರಿಗಾದರು ವಿಚಾರ ತಿಳಿಸಿದರೆ ಕೊಲೆ ಮಾಡೋದಾಗಿ ಬೆದರಿಕೆ ಆರೋಪಿ ಹಾಕಿದ್ದಾನೆ ಎಂದು ಜೀನಿ ಕಂಪನಿಯ ಮಾಲೀಕನ ವಿರುದ್ಧ ಗಂಭೀರ ಆರೋಪ ಮಾಡಿ ಸಂತ್ರಸ್ತ ಯುವತಿ  ದೂರು ನೀಡಿದ್ದಾಳೆ. ಸಂತ್ರಸ್ತ ಯುವತಿ ಕೊಟ್ಟ ದೂರಿನ ಮೇರೆಗೆ ಕಳ್ಳಂಬೆಳ್ಳ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version