ಧರೆಗುರುಳಿದ 50 ಸಾವಿರ ಲೀಟರ್ ಸಾಮರ್ಥ್ಯದ ಬೃಹತ್ ಟ್ಯಾಂಕ್!
ಪರ್ಕಳ: ಉಡುಪಿ ಜಿಲ್ಲೆಯ ಪರ್ಕಳದ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯ ಪಕ್ಕದಲ್ಲಿ ಬೃಹತ್ ಗಾತ್ರದ ನೀರಿನ ಟಾಂಕಿಯೊಂದು ಪಕ್ಕದಲ್ಲಿರುವ ಪರ್ಕಳ ಎಜುಕೇಶನ್ ಸೊಸೈಟಿಯ ಜಾಗದೊಳಗೆ ಧರೆಗುಳಿದು ಮಗುಚಿ ಬಿದ್ದಿದೆ.
ತನ್ನೆಲ್ಲ ಸ್ತಂಭಗಳು ಶೀತಲಾವಸ್ಥೆಯಲ್ಲಿದ್ದ. ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ ಹಳೆಯದಾದ ನೀರಿನ ಟ್ಯಾಂಕಿ ಬಿದ್ದಿದೆ. ಪಕ್ಕದಲ್ಲಿ 80ನೇ ಬಡಗಬೆಟ್ಟಿಗೆ ಸಂಚರಿಸುವ ರಸ್ತೆ ಜನನಿ ಬಿಡ ಪ್ರದೇಶವಾಗಿದ್ದು, ಆಯತಪ್ಪಿ ರಸ್ತೆಗೆ ಬಿದ್ದರೆ ಅನಾಹುತ ತುಂಬಾ ಆಗುತ್ತಿತ್ತು.
ಪರ್ಕಳ ಎಜುಕೇಶನ್ ಸೊಸೈಟಿಯ ಈ ಜಾಗದಲ್ಲಿ ಹಿಂದೆ ಅಂಗನವಾಡಿಯು ಕೂಡ ಇತ್ತು,, ಇದೀಗ ಮುಚ್ಚಲ್ಪಟ್ಟಿದೆ ಸದ್ಯ ಇಲ್ಲಿ ಇರುವ ಕಟ್ಟಡದಲ್ಲಿ ಯಾರು ಇಲ್ಲದೇ ಇರುವುದರಿಂದ ಪ್ರಾಣ ಹಾನಿ ಸಂಭವಿಸಿಲ್ಲ.
ನಿರುಪಯುಕ್ತ ನಗರಸಭೆಯ ವ್ಯಾಪ್ತಿಯಲ್ಲಿ ಇಂತಹ ನೀರಿನ ಟ್ಯಾಂಕಿ ಇದ್ದಲ್ಲಿ ಕೂಡಲೇ ತೆರವುಗೊಳಿಸುವ ಕಾರ್ಯ ಮಾಡಬೇಕು ಮಾಡಬೇಕು. ಈ ಪ್ರಕರಣ ನಗರಸಭೆಯ ಅಧ್ಯಕ್ಷರ ವಾರ್ಡು ಹಾಗೂ ಅವರ ಮನೆಯ ಸಮೀಪ ನಡೆದಿರುವುದು ತುಂಬಾ ಕೇದಕರ. ತಕ್ಷಣ ಇದನ್ನು ತೆರವು ಮಾಡಬೇಕು.
ಹಾಗೂ ಇತರ ಕಡೆ ಇಂತಹ ನಿರ್ಜೀವ ಸ್ಥಿತಿಯಲ್ಲಿರುವ ನೀರಿನ ಟ್ಯಾಂಕಿಗಳನ್ನ ಕೂಡಲೇ ನೆಲಸಮ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ರಾಜೇಶ್ ಪ್ರಭು ಪರ್ಕಳ, ನಗರಸಭೆಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವರ್ಗದವರನ್ನು ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

























