2:01 PM Wednesday 21 - January 2026

“ಎಣ್ಣೆ ಹೊಡೆದ ಮತ್ತಿನಲ್ಲಿ ದರ್ಶನ್ ಹೊಡೆದ್ಬಿಟ್ಟಿದ್ದಾರೆ” | ಮತ್ತೆ ಕಿಡಿ ಹತ್ತಿಸಿತು ಪ್ರತ್ಯಕ್ಷದರ್ಶಿಯ ಹೇಳಿಕೆ

darshan
17/07/2021

ಬೆಂಗಳೂರು: “ಏನೋ ಒಂದು ಐಟಂ ಕೇಳಿದ್ದು ಕೊಡ್ಲಿಲ್ಲ ಅಂತ ಎಣ್ಣೆ ಹೊಡೆದ ಮತ್ತಿನಲ್ಲಿ ಹೊಡೆದ್ ಬಿಟ್ಟಿದ್ದಾರೆ” ಎಂದು ಜೂನ್ 24ರಂದು ನಟ ದರ್ಶನ್ ಅವರು ಹೊಟೇಲ್ ನಲ್ಲಿ ಸಪ್ಲೆಯರ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಯುರಿಟಿ ಗಾರ್ಡ್ ವೊಬ್ಬರು ನೀಡಿರುವ ಹೇಳಿಕೆಯ ವಿಡಿಯೋದಿಂದ ಬಯಲಾಗಿದೆ.

ನಟ ದರ್ಶನ್ ಸಪ್ಲೆಯರ್ ಗೆ ಹಲ್ಲೆ ನಡೆಸಿಲ್ಲ, ಬರೇ ಬೈದಿದ್ದರು ಎನ್ನುವ ಸುದ್ದಿ ನಿನ್ನೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ಪ್ರಕರಣದ ಬೆನ್ನತ್ತಿರುವ  ಮಾಧ್ಯಮವೊಂದು ನಡೆಸಿರುವ ತನಿಖಾ ವರದಿಯಲ್ಲಿ ಈ ವಿಚಾರ ಬಯಲಾಗಿದೆ ಎಂದು ವರದಿಯಾಗಿದೆ.

ಹೊಟೇಲ್ ನ ಸ್ವಿಮಿಂಗ್ ಫೂಲ್ ಬಳಿ ಟೇಬಲ್ ಹಾಕಿಕೊಂಡು ದರ್ಶನ್ ಹಾಗೂ ಗ್ಯಾಂಗ್ ಪಾರ್ಟಿ ನಡೆಸಿದ್ದರು. ಈ ವೇಳೆ ಯಾವುದೋ ಒಂದು ಐಟಂ ಸಿಗಲಿಲ್ಲ ಎಂದು ಕೋಪಗೊಂಡು ಸಪ್ಲೆಯರ್ ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಲಾಗಿದೆ. ದರ್ಶನ್ ಅವರಿಂದ ಪೆಟ್ಟು ತಿಂದ ಸಪ್ಲೆಯರ್ ಅಳುತ್ತಾ ಒಳಗಡೆ ಹೋದರು ಎಂದು ವಿಡಿಯೋದಲ್ಲಿ ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಇಂದ್ರಜಿತ್ ಲಂಕೇಶ್ ಅವರು ನಟ ದರ್ಶನ್ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಆಕ್ಟಿವ್ ಆಗಿದ್ದ ದರ್ಶನ್, ಹೊಟೇಲ್ ಗೂ ಭೇಟಿ ನೀಡಿ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಒಂದು ಹಂತಕ್ಕೆ ತಾನು ಹಲ್ಲೆ ನಡೆಸಿಲ್ಲ ಬೈದಿದ್ದಷ್ಟೇ ಎಂದು ವಾದಿಸಿದ್ದರು. ಇದೇ ವಾದವನ್ನು ಹೊಟೇಲ್ ಮಾಲಿಕರು ಮಾಡಿದ್ದರು. ಇನ್ನು ಹಲ್ಲೆಗೊಳಗಾದ ವ್ಯಕ್ತಿ ಎಂದು ಹೇಳಲಾಗಿರುವ ವ್ಯಕ್ತಿ ಕೂಡ ತನಗೆ ಯಾರೂ ಹಲ್ಲೆ ಮಾಡಿಲ್ಲ, ಇದೆಲ್ಲ ಸುಳ್ಳು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಘಟನೆಯ ಪ್ರತ್ಯಕ್ಷದರ್ಶಿ ನೀಡಿರುವ ಹೇಳಿಕೆ ಮತ್ತೊಮ್ಮೆ ದರ್ಶನ್ ಗೆ ದೊಡ್ಡ ತಲೆನೋವು ತಂದಿದ್ದು, ಈ ಪ್ರಕರಣ ಇಷ್ಟರಲ್ಲೇ ಮುಗಿಯುವ ಸಾಧ್ಯತೆಗಳು ಕಂಡು ಬಂದಿಲ್ಲ.

ಇನ್ನಷ್ಟು ಸುದ್ದಿಗಳು:

ವರ ಇಷ್ಟವಿಲ್ಲ ಎಂದಿದ್ದಕ್ಕೆ ತಂಗಿಯನ್ನು ಕೊಡಲಿಯಿಂದ ಕೊಚ್ಚಿಕೊಂದ ಅಣ್ಣ!

ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವವರಿಗೆ ಬಿಗ್ ಶಾಕ್ ನೀಡಿದ ಪೊಲೀಸರು!

ಬಾಲಕಿಯನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದ 30 ಮಂದಿ | ನಾಲ್ವರು ಸಾವು, ಹಲವರು ನಾಪತ್ತೆ

ಜೊತೆ ಜೊತೆಯಲಿ ಧಾರಾವಾಹಿ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ ಅನು ಸಿರಿಮನೆ

ಮುಖಕ್ಕೆ ಹಾಕುವ ಮಾಸ್ಕ್ ನ್ನು ಬಿಜೆಪಿ ಸಚಿವ ಹಾಕಿದ್ದೆಲ್ಲಿಗೆ ಗೊತ್ತಾ? | ಫೋಟೋ ವೈರಲ್

ಇತ್ತೀಚಿನ ಸುದ್ದಿ

Exit mobile version