6:10 AM Thursday 16 - October 2025

ಚಪ್ಪಲಿ ಇಲ್ಲದೇ ಹೀರೋಯಿನ್ ಮನೆಯಲ್ಲಿ ಪೊಲೀಸರ ಎದುರು ನಿಂತಾಗ ದರ್ಶನ್ ನ ಸಪೋರ್ಟ್ ಗೆ ಯಾರು ಬಂದಿದ್ದರು |  ಜಗ್ಗೇಶ್ ಪ್ರಶ್ನೆ

24/02/2021

ಬೆಂಗಳೂರು: ಹಿರಿಯ ನಟ ಜಗ್ಗೇಶ್ ಹಾಗೂ ಡಿ ಬಾಸ್ ದರ್ಶನ್ ಫ್ಯಾನ್ಸ್ ನಡುವೆ ಕಳೆದ ಕೆಲವು ದಿನಗಳಿಂದ ಗುದ್ದಾಟ ಆರಂಭವಾಗಿದೆ. ಈ ನಡುವೆ ಜಗ್ಗೇಶ್ ಅವರ ಚಿತ್ರದ ಸೆಟ್ ಗೂ ದರ್ಶನ್ ಅಭಿಮಾನಿಗಳು  ಮುತ್ತಿಗೆ ಹಾಕಿದ ಘಟನೆಯೂ ನಡೆದಿದೆ. ಇದಾದ ಬಳಿಕ ಜಗ್ಗೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಹಳೆಯ ಹಲವು ವಿಚಾರಗಳನ್ನು ಕೆದಕಿದ್ದಾರೆ.

ನಟ ಜಗ್ಗೇಶ್ ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಆಡಿಯೋವೊಂದು ವೈರಲ್ ಆಗಿತ್ತು. ಆರೆಸ್ಸೆಸ್ ಜೊತೆಗೆ ನಂಟಿರುವ ಜಗ್ಗೇಶ್ ಆರೆಸ್ಸೆಸ್ ಮುಖವಾಣಿ ಪತ್ರಿಕೆಯೊಂದರ ವಿಚಾರವಾಗಿಯೂ ಈ ಆಡಿಯೋದಲ್ಲಿ ಮಾತನಾಡಿದ್ದಾರೆ. ಈ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದಾಗಿ ಜಗ್ಗೇಶ್ ವಿರುದ್ಧ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು.

ಇದೀಗ ಜಗ್ಗೇಶ್ ಅವರು ಮತ್ತೆ ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ್ಶನ್ ಅವರನ್ನು ನಾನು ಪ್ರೀತಿಸುತ್ತೇನೆ ಎಂದು ಹೇಳುತ್ತಲೇ, ಹಳೆಯ ವಿಚಾರ ಕೆದಕಿದ ಜಗ್ಗೇಶ್,  ಅವತ್ತು ಅವನನ್ನು ಪೊಲೀಸರು ಚಪ್ಪಲಿ ಇಲ್ಲದೇ ಸಣ್ಣ ಹೀರೋಯಿನ್ ಮನೆಯಲ್ಲಿ ನಿಲ್ಲಿಸಿದ್ದರು. ಆಗ ಯಾರು ಬಂದಿದ್ದರು ಅವರನ ಸಪೋರ್ಟ್ ಗೆ ಎಂದು ಜಗ್ಗೇಶ್ ಪ್ರಶ್ನಿಸಿದ್ದಾರೆ.  ಕಾನೂನು ಪ್ರಕಾರ ಕ್ರಮಕೈಗೊಂಡು ಆತನನ್ನು ಕಳುಹಿಸಿ ಅಂತ ನಾನೇ ಪೊಲೀಸರಿಗೆ ಹೇಳಿದ್ದೆ. ಇದನ್ನು ದರ್ಶನ್ ಕೂಡ ನೆನೆಯಬೇಕು ಎಂದು ಜಗ್ಗೇಶ್ ಹೇಳಿದರು.

ಇತ್ತೀಚಿನ ಸುದ್ದಿ

Exit mobile version