ಪ್ರತಾಪ್ ಸಿಂಹಗೆ ಮೈಸೂರಿನಲ್ಲಿ ಘೇರಾವ್ ಹಾಕಿದ ರಾಮಭಕ್ತರು!

22/01/2024
ಮೈಸೂರು: ರಾಮಲಲ್ಲಾ ಮೂರ್ತಿಗೆ ಕಲ್ಲು ಕೊಟ್ಟ ದಲಿತ ರೈತನಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಂಸದ ಪ್ರತಾಪ್ ಸಿಂಹಗೆ ದಲಿತ ರಾಮಭಕ್ತರು ಘೇರಾವ್ ಹಾಕಿರುವ ಘಟನೆ ವರದಿಯಾಗಿದೆ.
ರಾಮಲಲ್ಲಾ ವಿಗ್ರಹ ಕೆತ್ತನೆಗೆ ಕಲ್ಲು ತೆಗೆದ ಸ್ಥಳದಲ್ಲಿ ಹಾರೋಹಳ್ಳಿ ಮತ್ತು ಗುಜ್ಜೇಗೌಡನಪುರ ಗ್ರಾಮಸ್ಥರು ಸೋಮವಾರ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಸಂಸದ ಪ್ರತಾಪ್ ಸಿಂಹ ಆಗಮಿಸಿದ ವೇಳೆ ಈ ಘಟನೆ ನಡೆದಿದೆ.
ಸಂಸದ ಪ್ರತಾಪ್ ಸಿಂಹ ‘ದಲಿತ ವಿರೋಧಿ’ ಎಂದು ಆಕ್ರೋಶ ವ್ಯಕ್ತಪಡಿಸಿದ ದಲಿತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಡಿಯೋ ನೋಡಿ: