ಧರ್ಮಸ್ಥಳ ಪ್ರಕರಣ: ಎಸ್ ಐಟಿ ಕಚೇರಿಗೆ ಆಗಮಿಸಿದ ಮತ್ತಿಬ್ಬರು ದೂರುದಾರರು

dharmasthala
13/08/2025

ಬೆಳ್ತಂಗಡಿ: ಧರ್ಮಸ್ಥಳ ಸುತ್ತಮುತ್ತ ಮೃತದೇಹಗಳನ್ನು ಹೂತು ಹಾಕಿರುವ ಘಟನೆಗೆ ಸಂಬಂಧಿಸಿದಂತೆ  ಇಬ್ಬರು ಹೊಸ ದೂರುದಾರರು ಎಸ್ ಐಟಿ ಕಚೇರಿಗೆ ಆಗಮಿಸಿದ್ದಾರೆ.

ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಪುರಂದರ ಗೌಡ ಹಾಗೂ ತುಲಾರಾಮ ಗೌಡ ಅವರು ಎಸ್ ಐಟಿ ಕಚೇರಿಗೆ ಆಗಮಿಸಿದ್ದು, ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.

ಸಾಕ್ಷಿ ಪುರಂದರ ಗೌಡ ಇದೇ ವೇಳೆ ಮಾತನಾಡಿ,  ನೇತ್ರಾವತಿ ಸ್ನಾನಘಟ್ಟದಲ್ಲಿ ನನ್ನ ಅಂಗಡಿಯಿತ್ತು. ಅಲ್ಲಿದ್ದ ವೇಳೆ ಮೃತದೇಹಗಳನ್ನು ಹೂತು ಹಾಕುವುದನ್ನು ನೋಡಿದ್ದೇನೆ. ಇದೇ ವ್ಯಕ್ತಿ ಇರಬಹುದು ಅಂತ ಅನಿಸುತ್ತಿದೆ. ಒಂದಕ್ಕಿದ ಹೆಚ್ಚು ಜನರು ಸೇರಿ ಮೃತದೇಹಗಳನ್ನು ಹೂತು ಹಾಕುವುದನ್ನು ನೋಡಿದ್ದೇವೆ. ಸಾಕ್ಷಿ ದೂರುದಾರ ತೋರಿಸಿದ ಒಂದನೆಯ ಸ್ಥಳದಲ್ಲಿ ಹಾಗೂ 13ನೆಯ ಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.

ಮತ್ತೊಬ್ಬ ಸಾಕ್ಷಿ ವ್ಯಕ್ತಿ ತಾನು ಸಾಕ್ಷಿದೂರುದಾರ ತೋರಿಸಿದ ಸ್ಥಳವಲ್ಲದೆ ಬೇರೆ ಸ್ಥಳಗಳಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದನ್ನು ನೋಡಿದ್ದೇನೆ  ಈ ಬಗ್ಗೆ ಎಸ್.ಐ.ಟಿಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version