ಧರ್ಮಸ್ಥಳದಲ್ಲಿ ಗುಂಡಿ ಅಗೆತ ಆರಂಭ: ಮೃತದೇಹ ಹೊರ ತೆಗೆಯುವ ಕಾರ್ಯ ಆರಂಭ!

ಧರ್ಮಸ್ಥಳ: ನೂರಾರು ಶವಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ದೂರು ಧಾರ ಸಾಕ್ಷಿ ತೋರಿಸಿರುವ 13 ಸ್ಥಳಗಳಲ್ಲಿ ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯ ಆರಂಭಗೊಂಡಿದೆ.
ಇಂದು ಧರ್ಮಸ್ಥಳಕ್ಕೆ ಸುಮಾರು 12ರಿಂದ 15 ಕಾರ್ಮಿಕರನ್ನು ಎಸ್ ಐಟಿ ಅಧಿಕಾರಿಗಳು ಕರೆತಂದಿದ್ದು, ಗುಂಡಿ ಅಗೆಯುವ ಕಾರ್ಯ ಆರಂಭಗೊಂಡಿದೆ.
ಗುಂಡಿ ಅಗೆಯುವ ಕಾರ್ಯ ಆರಂಭವಾಗುತ್ತಿರುವಾಗಲೇ ಜೋರಾಗಿ ಮಳೆ ಸುರಿಯಲು ಆರಂಭಗೊಂಡಿದೆ. ಮಳೆಯ ನಡುವೆಯೇ ಕಾರ್ಮಿಕರು ಗುಂಡಿ ಅಗೆಯುವುದನ್ನು ಮುಂದುವರಿಸಿದ್ದಾರೆ.
6 ಅಡಿ ಅಗಲ 6 ಅಡಿ ಉದ್ದಕ್ಕೆ ಗುಂಡಿ ಅಗೆತ ಆರಂಭಗೊಂಡಿದೆ. ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ ಇದೀಗ ಉತ್ಖನನ ಆರಂಭಗೊಂಡಿದೆ. ಮಳೆಯಲ್ಲಿ ನನೆಯುತ್ತಿರುವ ಕಾರ್ಮಿಕರಿಗೆ ಸಿಬ್ಬಂದಿ ಕೊಡೆ ಹಿಡಿಯುತ್ತಿದ್ದಾರೆ. ಗುಂಡಿ ಅಗೆತ ಭರದಿಂದ ಸಾಗುತ್ತಿದೆ.
ಇದನ್ನೂ ಓದಿ: ನಗ್ನವಾಗಿ ಓಡಿ ಬಂದ ಯುವತಿ, ಆಕೆಯನ್ನು ಓಡಿಸಿಕೊಂಡು ಬಂದ ನಾಲ್ವರು ಪುರುಷರು: ಧರ್ಮಸ್ಥಳ ಸಮೀಪ ಮತ್ತೊಂದು ಘಟನೆಗೆ ಸಾಕ್ಷಿ!
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD