10:23 AM Wednesday 20 - August 2025

ಸ್ಮಶಾನದ ಅರ್ಚಕ ಸೇರಿದಂತೆ ಮೂವರಿಂದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ದೇಶಾದ್ಯಂತ ಆಕ್ರೋಶ

rahul gandhi
04/08/2021

ಫೋಟೋ: ಸಂತ್ರಸ್ತರ ಕುಟುಂಬದೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ: ದೇಶದ ರಾಜಧಾನಿಯ ಕ್ಯಾಂಟೋನ್ಮೆಂಟ್ ಪ್ರದೇಶದಲ್ಲಿ 9 ವರ್ಷ ವಯಸ್ಸಿನ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ಹತ್ಯೆ ನಡೆಸಲಾಗಿದ್ದು, ಇಲ್ಲಿನ ನಂಗಲ್ ಗ್ರಾಮದಲ್ಲಿ ವಾಸಿಸುತ್ತಿದ್ದ ಸಂತ್ರಸ್ತೆ ಚಿತಾಗಾರದ ಕೂಲರ್ ನಿಂದ ನೀರು ತರಲು ಹೋದ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು.

ಹತ್ಯೆಯ ಬಳಿಕ ಬಾಲಕಿ ಶಾಕ್ ಹೊಡೆದು ಸಾವಿಗೀಡಾಗಿದ್ದಾಳೆ ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಆದರೆ, ಆರೋಪಿಗಳಲ್ಲಿ ಓರ್ವನಾಗಿರುವ ಸ್ಮಶಾನದ ಅರ್ಚಕ, ಸಂತ್ರಸ್ತೆಯ ಕುಟುಂಬದ ಸಮ್ಮತಿಯನ್ನೇ ಪಡೆಯದೇ, ಆತುರಾತುರವಾಗಿ ಬಾಲಕಿಯ ಅಂತ್ಯ ಸಂಸ್ಕಾರ ನಡೆಸಿದ್ದು,  ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾನೆ. ಈ ಘಟನೆ ಸಂಬಂಧ ಮಗುವಿನ ಪೋಷಕರು ದೂರು ನೀಡಿದ್ದು, ಇದೀಗ ರಾಷ್ಟ್ರದಾದ್ಯಂತ ಈ ಪ್ರಕರಣ ತೀವ್ರತೆ ಪಡೆದುಕೊಂಡಿದೆ.

ಇನ್ನೂ ಪ್ರಕರಣವನ್ನು ಉತ್ತರಪ್ರದೇಶದ  ಹತ್ರಾಸ್ ಮಾದರಿಯಲ್ಲಿ ಮುಚ್ಚಿ ಹಾಕಲು ಯತ್ನಿಸಲಾಗಿದೆ. ಹೀಗಾಗಿ ಟ್ವಿಟ್ಟರ್ ನಲ್ಲಿ ಇದೀಗ ಬಾಲಕಿಗೆ ನ್ಯಾಯ ಒದಗಿಸಲು ಮಾನವ ಕುಲ ಮುಂದಾಗಿದ್ದು, ಟ್ವಿಟ್ಟರ್ ಅಭಿಯಾನವನ್ನು ನಡೆಸಲಾಗುತ್ತಿದೆ.

ಅಪರಾಧಿಗಳನ್ನು ರಕ್ಷಿಸಲು ಬಾಲಕಿಯ ಅಂತ್ಯಸಂಸ್ಕಾರವನ್ನು ಬಲವಂತವಾಗಿ ನಡೆಸಲಾಗಿದೆ. ಇಂತಹ ಘಟನೆಗಳನ್ನು ನೋಡಿಕೊಂಡು ಇಡೀ ದೇಶವೇ ಮೂಕವಾಗಿ ನಿಂತಿದೆ. ಈ ಘಟನೆಗಳಿಗೆ ಕೊನೆ ಇಲ್ಲವೇ?  ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ರಕ್ಷಣೆ ಮಾಡಬೇಕಿದ್ದ ಪೊಲೀಸರು ಸಂತ್ರಸ್ತೆಯ ಕುಟುಂಬದ ಮೇಲೆಯೇ ದಾಳಿ ನಡೆಸಿ, ಕುಟುಂಬಸ್ಥರು ತಮ್ಮ ಹೇಳಿಕೆಯನ್ನು ಬದಲಿಸಬೇಕು ಎಂದು ರಾತ್ರಿಯಿಡೀ ಥಳಿಸಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಚಿತಾಗಾರದ ಅರ್ಚಕ, 55 ವರ್ಷ ವಯಸ್ಸಿನ ರಾಧೇ ಶ್ಯಾಮ್ ಹಾಗೂ ಅಲ್ಲಿನ ಮೂವರು ಉದ್ಯೋಗಿಗಳಾದ ಸಲೀಂ, ಲಕ್ಷ್ಮೀ ನಾರಾಯಣ್ ಮತ್ತು ಕುಲದೀಪ್ ಅವರನ್ನು ಬಂಧಿಸಿದ್ದಾರೆ. ಇನ್ನೂ ಈ ಹೋರಾಟದಲ್ಲಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ನೇರವಾಗಿ ಹೋರಾಟಕ್ಕೆ ಇಳಿದಿದ್ದಾರೆ.

ಇನ್ನಷ್ಟು ಸುದ್ದಿಗಳು…

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ  ಕಿರುಕುಳ | ಆರೋಪಿ ಅರೆಸ್ಟ್

ಡಯಾಲಿಸಿಸ್ ಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯ ಮೇಲೆ ವಾರ್ಡ್ ಬಾಯ್ ನಿಂದ ಅತ್ಯಾಚಾರ!

ಯೋ ಯೋ ಹನಿ ಸಿಂಗ್ ವಿರುದ್ಧ ಪತ್ನಿಯಿಂದ ದೂರು: ನಟಿಯರೊಂದಿಗೆ ಅಕ್ರಮ ಸಂಬಂಧ, ಮಾದಕ ವ್ಯಸನದ ಆರೋಪ

ಪ್ರೀತಿಸಿಲು ನಿರಾಕರಿಸಿದ ಬಾಲಕಿಯನ್ನು ದಾರಿ ಮಧ್ಯೆ ತಡೆದು ಯುವಕನಿಂದ ಘೋರ ಕೃತ್ಯ!

46.1 ಲಕ್ಷ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡ ಏರ್ ಟೆಲ್!

ಇತ್ತೀಚಿನ ಸುದ್ದಿ

Exit mobile version