ಗ್ಯಾಂಗ್ರಿನ್ ಸೋಂಕಿನಿಂದ ಬಳಲುತ್ತಿದ್ದ ‘ಬಾಲಣ್ಣ’ ಆನೆಯ ಬಲ ಕಿವಿ ಕತ್ತರಿಸಿದ ವೈದ್ಯರು
ಶಿವಮೊಗ್ಗ: ಸಕ್ರೆಬೈಲು ಆನೆ ಶಿಬಿರದ ಬಾಲಣ್ಣ ಆನೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದೆ. ಈ ಆನೆಯ ಬಲ ಕಿವಿಯಲ್ಲಿ ಗ್ಯಾಂಗ್ರಿನ್ ಸೋಂಕು ಕಾಣಿಸಿಕೊಂಡಿದ್ದು, ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಿಬ್ಬಂದಿಯ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ಇದೀಗ ಸೋಂಕಿಗೊಳಗಾಗಿದ್ದ ಬಾಲಣ್ಣ ಆನೆಯ ಕಿವಿ ಕಪ್ಪಾಗಿ ಕೀವು ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಬಲ ಕಿವಿಯನ್ನು ಕತ್ತರಿಸಲಾಗಿದ್ದು, ಈ ಮೂಲಕ ವೈದ್ಯರ ತಂಡ ಬಾಲಣ್ಣ ಆನೆಗೆ ಚಿಕಿತ್ಸೆ ಮುಂದುವರಿಸಿದೆ.
ತಜ್ಞ ವೈದ್ಯರಾದ ಡಾ.ಚೆಟ್ಟಿಯಪ್ಪ, ಡಾ.ರಮೇಶ್ ಸೇರಿದಂತೆ ಒಟ್ಟು 5 ಜನರ ವೈದ್ಯರ ತಂಡ ಆನೆಗೆ ಚಿಕಿತ್ಸೆ ಆರಂಭಿಸಿದೆ. ಗ್ಯಾಂಗ್ರಿನ್ ಸೋಂಕು ದೇಹದ ಇತರ ಭಾಗಕ್ಕೂ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರು ಬಾಲಣ್ಣ ಆನೆಯ ಕಿವಿ ಕತ್ತರಿಸಿ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























