ಡೊನಾಲ್ಡ್ ಟ್ರಂಪ್ ಒಬ್ಬ ಈಡಿಯೇಟ್: ಇರಾನ್ ರಾಯಭಾರ ಕಚೇರಿಯಿಂದ ವಿಡಿಯೋ ಬಿಡುಗಡೆ
ಪ್ರಿಟೋರಿಯಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವಿನ ಶೀತಲ ಸಮರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಾದಿರಂಪ ಬೀದಿರಂಪವಾಗಿದೆ. ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯ ಆಡಿಯೋ ಕ್ಲಿಪ್ ವೊಂದನ್ನು ಬಳಸಿಕೊಂಡು ದಕ್ಷಿಣ ಆಫ್ರಿಕಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಟ್ರಂಪ್ ಅವರನ್ನು “ಮೂರ್ಖ” (Idiot) ಎಂದು ಕರೆದು ಲೇವಡಿ ಮಾಡಿದೆ.
ಘಟನೆಯ ಹಿನ್ನೆಲೆ: ಇತ್ತೀಚೆಗೆ ಇರಾನ್ ನೌಕಾಪಡೆಗೆ ಸಂಬಂಧಿಸಿದ ರೇಡಿಯೋ ಸಂವಹನದ ವೀಡಿಯೋವೊಂದು ವೈರಲ್ ಆಗಿತ್ತು. ಈ ವೀಡಿಯೋದಲ್ಲಿ ಇರಾನ್ ಅಧಿಕಾರಿಯೊಬ್ಬರು “ಮೂರ್ಖ” ಎಂಬ ಪದವನ್ನು ಬಳಸಿದ್ದರು. ಆರಂಭದಲ್ಲಿ, ಈ ಪದವನ್ನು ಇರಾನ್ ತನ್ನದೇ ದೇಶದ ವಿದೇಶಾಂಗ ಸಚಿವರಿಗೆ ಬಳಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ಇರಾನ್ ರಾಯಭಾರ ಕಚೇರಿ, “ಆ ಮೂರ್ಖ ಎಂಬ ಪದ ಬಳಕೆಯಾಗಿರುವುದು ಅಮೆರಿಕದ ಅಧ್ಯಕ್ಷ ಟ್ರಂಪ್ ಗಾಗಿ. ಒಮ್ಮೆ ಗೂಗಲ್‌ನಲ್ಲಿ ‘Idiot’ ಎಂದು ಹುಡುಕಿ ನೋಡಿ, ಅದು ಯಾರಿಗೆ ಅನ್ವಯಿಸುತ್ತದೆ ಎಂಬುದು ನಿಮಗೇ ತಿಳಿಯುತ್ತದೆ” ಎಂದು ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಕೆಣಕಿದೆ.
ಹಾರ್ಮುಜ್ ಜಲಸಂಧಿ ಬಂದ್:
ವೈರಲ್ ಆಗಿರುವ ಆಡಿಯೋದಲ್ಲಿ ಇರಾನ್ ನೌಕಾಪಡೆಯು ಸಮುದ್ರ ಮಾರ್ಗದಲ್ಲಿ ಸಂಚರಿಸುವ ಹಡಗುಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. “ಇದು ಚಾನೆಲ್ 16 ರ ಮೂಲಕ ಇರಾನ್ ಸೆಪಾ ನೌಕಾಪಡೆಯ ಕರೆ. ಹಾರ್ಮುಜ್ ಜಲಸಂಧಿ ಇನ್ನೂ ಮುಚ್ಚಲ್ಪಟ್ಟಿದೆ. ನಮ್ಮ ಇಮಾಮ್ ಖಮೇನಿ ಅವರ ಆದೇಶದ ಮೇರೆಗೆ ನಾವು ಇದನ್ನು ತೆರೆಯುತ್ತೇವೆಯೇ ಹೊರತು, ಯಾರೋ ಒಬ್ಬ ‘ಮೂರ್ಖನ’ ಟ್ವೀಟ್‌ಗಳನ್ನು ನೋಡಿಯಲ್ಲ ಎಂದು ಹೇಳಿದೆ.
ವಿಶ್ವದ ಅತಿ ಹೆಚ್ಚು ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯ ಮೇಲೆ ಪೂರ್ಣ ನಿಯಂತ್ರಣ ಸಾಧಿಸಲು ಇರಾನ್ ಪ್ರಯತ್ನಿಸುತ್ತಿದೆ. ಈ ಹಿಂದೆ ಟ್ರಂಪ್ ಅವರು ಟ್ವೀಟ್ ಮೂಲಕ ಇರಾನ್ ಗೆ ಎಚ್ಚರಿಕೆ ನೀಡುತ್ತಿದ್ದರು. ಈಗ ಅದೇ ಟ್ವೀಟ್ ಗಳನ್ನು ಗುರಿಯಾಗಿಸಿಕೊಂಡು ಇರಾನ್ ಈ ರೀತಿಯ ಪ್ರತಿದಾಳಿ ನಡೆಸಿದೆ. ಸದ್ಯ ಈ “ಡಿಜಿಟಲ್ ವಾರ್” ಜಾಗತಿಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























