10:18 AM Saturday 23 - August 2025

ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್ ವಿತರಿಸಿ ಡಾ.ಜಿ.ಪರಮೇಶ್ವರ್ ಹುಟ್ಟುಹಬ್ಬ ಆಚರಣೆ

celebrestion
06/08/2024

ಔರಾದ: ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ ಯುವ ಸೈನ್ಯ ಔರಾದ ವತಿಯಿಂದ ತಾಲೂಕಿನ ಚಿಂತಾಕಿ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ನು ವಿತರಿಸುವ ಮ‌ೂಲಕ ಕೇಕ್ ಕತ್ತರಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಹುಟ್ಟು ಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಚಿಂತಾಕಿ ಪೊಲೀಸ್ ಠಾಣೆಯ ಪಿಎಸ್ ಐ ಸಿದ್ಧಲಿಂಗ ಅವರು ಕೇಕ್ ಕತ್ತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಭವಿಷ್ಯದ ಪ್ರಜೆಗಳಾಗಿ ತಮ್ಮ ಕುಟುಂಬಕ್ಕೆ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸಬೇಕು ಒಳ್ಳೆಯ ಉದ್ಯೋಗ ಪಡೆದುಕೊಳ್ಳಿ ಎಂದು ನುಡಿದರು.

ಸುನಿಲ ಮಿತ್ರಾ ಮಾತನಾಡಿ, ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ ಯುವ ಸೈನ್ಯ ವತಿಯಿಂದ ಅವರ ಹುಟ್ಟು ಹಬ್ಬವನ್ನು ಪ್ರತಿ ವರ್ಷ ಸರಕಾರಿ ಶಾಲೆಯ ಮಕ್ಕಳ ಸಮ್ಮುಖದಲ್ಲಿ ಅವರಿಗೆ ನೋಟ್ ಬುಕ್ ವಿತರಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ವಿನೂತನವಾಗಿ ಆಚರಿಸುತ್ತೆವೆ ಎಂದು ನುಡಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ ಯುವ ಸೈನ್ಯ ಅಧ್ಯಕ್ಷ ದತ್ತಾತ್ರಿ ಚಿಕ್ಲೆ, ಅನೀಲ, ಸೊಪಾನ, ಕೇಶವ ಗುಡಪಳ್ಳಿ, ಸಂತೋಷ್, ಸಂಜು ನಾಗೂರ, ಅಶೋಕ ನಾಗನಪಲ್ಲಿ ಹಾಗೂ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ರವಿಕುಮಾರ ಶಿಂದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version