12:43 AM Thursday 21 - August 2025

ಭೋಪಾಲ್ ಬಳಿಯ ಕಾರ್ಖಾನೆಯಿಂದ 1,800 ಕೋಟಿ ಮೌಲ್ಯದ ಡ್ರಗ್ಸ್ ವಶ : ಇಬ್ಬರ ಬಂಧನ

06/10/2024

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮತ್ತು ಗುಜರಾತ್ ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 1,800 ಕೋಟಿ ರೂ.ಗಳ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಧ್ಯಪ್ರದೇಶದ ಭೋಪಾಲ್ ಬಳಿಯ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿದಾಗ ಭಾರಿ ಪ್ರಮಾಣದ ಮಾದಕವಸ್ತು ಸಾಗಣೆ ಪತ್ತೆಯಾಗಿದೆ.

ಈ ದಾಳಿಯು ಕಾರ್ಖಾನೆಯಲ್ಲಿ ತಯಾರಿಸಲಾಗುತ್ತಿದ್ದ ಎಂಡಿ (ಮೆಫೆಡ್ರೋನ್) ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಅಕ್ರಮ ಮಾದಕವಸ್ತು ಉತ್ಪಾದನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.

ಗುಜರಾತ್ ಸಚಿವ ಹರ್ಷ್ ಸಾಂಘ್ವಿ ಅವರು ಡ್ರಗ್ಸ್ ವಿರುದ್ಧದ ಹೋರಾಟ ಮಾಡಿದ ಅಧಿಕಾರಿಗಳನ್ನು ಶ್ಲಾಘಿಸಿದರು. “ಈ ಕಾರ್ಯಾಚರಣೆಯು ಮಾದಕವಸ್ತು ಕಳ್ಳಸಾಗಣೆ ಮತ್ತು ದುರುಪಯೋಗವನ್ನು ಎದುರಿಸುವಲ್ಲಿ ನಮ್ಮ ಕಾನೂನು ಜಾರಿ ಸಂಸ್ಥೆಗಳ ದಣಿವರಿಯದ ಪ್ರಯತ್ನಗಳನ್ನು ತೋರಿಸುತ್ತದೆ. ನಮ್ಮ ಸಮಾಜದ ಆರೋಗ್ಯ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಅವರ ಸಹಯೋಗದ ಪ್ರಯತ್ನಗಳು ನಿರ್ಣಾಯಕವಾಗಿವೆ” ಎಂದಿದ್ದಾರೆ.

 

ಇತ್ತೀಚಿನ ಸುದ್ದಿ

Exit mobile version