ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

17/03/2021

ಕಾಸರಗೋಡು: ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರ ಮೃತದೇಹ  ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ  ಚೆರ್ವತ್ತೂರಿನಲ್ಲಿ ನಡೆದಿದ್ದು,  ನಿರ್ಮಾಣ ಹಂತದಲ್ಲಿರುವ ಕೋಣೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಪಿಲಿಕ್ಕೋಡ್ ಮಡಿವಾಯಿಯ ಆಟೋರಿಕ್ಷಾ ಚಾಲಕ 37 ವರ್ಷ ವಯಸ್ಸಿನ  ರೂಪೇಶ್,  ಹಾಗೂ ಅವರ ಮಕ್ಕಳಾದ ವೈದೇಹಿ(10), ಶಿವಾನಂದ(6) ಮೃತಪಟ್ಟವರಾಗಿದ್ದಾರೆ.  ಮಕ್ಕಳಿಬ್ಬರು ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ. ತಂದೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ರೂಪೇಶ್ ಅವರು ಕಾಞಂಗಾಡ್ ನ ಸವಿತಾ ಎಂಬಾಕೆಯನ್ನು ವಿವಾಹವಾಗಿದ್ದರು. ಇವರ ಕೌಟುಂಬಿಕ ಕಲಹದಿಂದಾಗಿ  ಪತಿ-ಪತ್ನಿ ಪ್ರತ್ಯೇಕವಾಗಿದ್ದು, ಬೇರೆ ಬೇರೆಯಾಗಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನೂ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version