7:01 PM Thursday 18 - December 2025

ನಾಲ್ ರೋಡಿನ ಚೆಕ್ ಪೋಸ್ಟ್ ಬಳಿ ಪುಂಡಾನೆ ದಾಳಿ:  ದ್ವಿಚಕ್ರ ವಾಹನ ಜಖಂ

chamarajanagara (
10/06/2023

ಚಾಮರಾಜನಗರ ಜಿಲ್ಲೆ ಗಡಿ ಭಾಗದ ನಾಲ್ ರೋಡ್ ಚೆಕ್ ಪೋಸ್ಟ್ ಬಳಿ  ಪುಂಡಾನೆಯೊಂದು ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ಮಾಡಿ ಬೈಕ್ ಜಖಂ ಮಾಡಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆ ಹನೂರು  ತಾಲೂಕಿನಿಂದ ತಮಿಳುನಾಡಿಗೆ  ಸಂಪರ್ಕ ಹೊಂದಿರುವ ನಾಲ್ ರೋಡ್ ಹಾಗೂ ಗರಿಕೆ ಕಂಡಿ ಮಾರ್ಗ ಮಧ್ಯ ಚೆಕ್ ಪೋಸ್ಟ್ ಸಮೀಪದಲ್ಲಿ

ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸುತ್ತಿದ್ದ ಬೈಕ್ ಸವಾರರ ಮೇಲೆ ಆನೆಯೊಂದು ದಾಳಿ  ಮಾಡಲು ಮುಂದಾಗಿದೆ. ಭಯಬೀತರಾದ ಬೈಕ್ ಸವಾರರು ತಮ್ಮ ವಾಹನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಸದ್ಯ ಬೈಕ್ ಸಂಪೂರ್ಣ ಜಖಂ ಆಗಿದ್ದು, ಬೈಕ್ ಸವಾರರಿಗೆ ಯಾವುದೇ ತೊಂದರೆಯಾಗದೇ ಆನೆ ದಾಳಿಯಿಂದ ಪಾರಾಗಿದ್ದಾರೆ. ನಂತರ ಅಕ್ಕ ಪಕ್ಕದಲ್ಲಿ ಇದ್ದ ಇತರೆ ವಾಹನ ಸವಾರರು ಕೂಗಾಡಿ ಆನೆಯನ್ನು ಕಾಡಿನತ್ತ ಓಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version