ಬೈಕ್ ಸ್ಕಿಡ್ ಆಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

24/02/2024
ಉಡುಪಿ: ಬೈಕ್ ಸ್ಕಿಡ್ ಆದ ಪರಿಣಾಮ ವಿದ್ಯಾರ್ಥಿಯೋರ್ವ ಸಾವನ್ನಪ್ಪಿ, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳದ ಪರ್ಪಲೆ ಗುಡ್ಡ ತಿರುವಿನಲ್ಲಿ ನಡೆದಿದೆ.
ಬ್ರಹ್ಮಾವರ ನಿವಾಸಿ ಆಕಾಶ್ ಕಾಂಚನ್(18) ಮೃತಪಟ್ಟ ವಿದ್ಯಾರ್ಥಿಯಾಘಿದ್ದು, ಈತ ಈತ ನಿಟ್ಟೆಯ ಖಾಸಗಿ ಕಾಲೇಜಿನಲ್ಲಿ ಮೆಕ್ಯಾನಿಕ್ ಇಂಜಿನಿಯರಿಂಗ್ ಓದುತಿದ್ದ ಎಂದು ತಿಳಿದು ಬಂದಿದೆ.
ಕಾಲೇಜಿನಲ್ಲಿ ವಾರ್ಷಿಕೋತ್ಸವ ಇದ್ದ ಕಾರಣ ಸ್ನೇಹಿತರೊಡಗೂಡಿ ಪ್ರತ್ಯೇಕ ಬೈಕ್ ಗಳಲ್ಲಿ ತೆರಳುತಿದ್ದ ವೇಳೆ ಘಟನೆ ನಡೆದಿದೆ.