ಗಾಝಾದಲ್ಲಿ ಪ್ರತಿದಿನ ದೀಪಾವಳಿ: ರಾಮ್ ಗೋಪಾಲ್ ವರ್ಮಾ ವಿವಾದಿತ ಪೋಸ್ಟ್

ಹೈದರಾಬಾದ್: ಗಾಜಾ ನರಮೇಧವನ್ನು ಭಾರತದಲ್ಲಿ ಆಚರಿಸಲಾಗುತ್ತಿರುವ ದೀಪಾವಳಿಗೆ ಹೋಲಿಸುವ ಮೂಲಕ ಖ್ಯಾತ ಹಿಂದಿ ಮತ್ತು ತೆಲುಗು ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ವಿವಾದಕ್ಕೀಡಾಗಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ರಾಮ್ ಗೋಪಾಲ್ ವರ್ಮಾ, ಭಾರತದಲ್ಲಿ, ಕೇವಲ ಒಂದು ದಿನ ಮಾತ್ರ ದೀಪಾವಳಿ ಮತ್ತು ಗಾಜಾದಲ್ಲಿ, ಪ್ರತಿ ದಿನವೂ ದೀಪಾವಳಿ ಎಂದು ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಗಾಝಾದಲ್ಲಿರುವುದು ಮಾನವೀಯ ಬಿಕ್ಕಟ್ಟು, ಅಲ್ಲಿ ಮಾತುಬಾರದ ಪುಟ್ಟ ಮಗುವಿನಿಂದ ಆರಂಭಿಸಿ, ನಡೆಯಲು ಸಾಧ್ಯವಾಗದ ವೃದ್ಧರವರೆಗೂ ನರಮೇಧವೇ ನಡೆದಿದೆ. ಅಮಾಯಕರ ಮಾರಣಹೋಮಾ ನಡೆದಿದೆ. ಇಂತಹ ಸ್ಥಿತಿಯನ್ನು ಭಾರತೀಯ ಹಬ್ಬದೊಂದಿಗೆ ಹೋಲಿಕೆ ಮಾಡಿರುವುದು ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ.
ರಾಮ್ ಗೋಪಾಲ್ ವರ್ಮಾ, ಅವರನ್ನು ನೆಟ್ಟಿಗರು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ನೀವು ಮನುಷ್ಯರಾಗಲು ಇನ್ನೆಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತೀರಿ? ಆಚರಣೆ ಮತ್ತು ವಿನಾಶದ ನಡುವಿನ ವ್ಯತ್ಯಾಸ ನಿಮಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಪೋಸ್ಟ್ ಸಂವೇದನಾ ರಹಿತವಾದದ್ದು ಎಂದು ಕಾಮೆಂಟ್ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD