ಪುತ್ರಿಯ ಮದುವೆಯ ದಿನದಂದೇ ತಂದೆ ಹೃದಯಾಘಾತದಿಂದ ಸಾವು

hasanabba
16/05/2023

ಪುತ್ರಿಯ ಮದುವೆಯ ದಿನದಂದೇ ತಂದೆ ಹೃದಯಾಘಾತದಿಂದ ನಿಧನರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೋಳಿಯಾರ್ ಕುಚುಗುಡ್ಡೆಯಲ್ಲಿ ನಡೆದಿದೆ. ಹಸನಬ್ಬ (60) ಮೃತರು ಎಂದು ಗುರುತಿಸಲಾಗಿದೆ.

ಬೀಡಿ‌ ಕಾಂಟ್ರಾಕ್ಟರ್ ಆಗಿದ್ದ ಇವರ ಮಗಳಿಗೆ ಕಾಸರಗೋಡಿನ ಯುವಕನೊಂದಿಗೆ ಸೋಮವಾರ ಹೊಸಂಗಡಿಯ ಗ್ರಾಂಡ್ ಅಡಿಟೋರಿಯಂ ನಲ್ಲಿ ಮದುವೆ ನಿಗದಿ ಆಗಿತ್ತು.‌ ಆದರೆ ಹಸನಬ್ಬರಿಗೆ ಸೋಮವಾರ ಮುಂಜಾನೆ  ತೀವ್ರ ಎದೆನೋವು ಕಾಣಿಸಿಕೊಂಡಿತ್ತು.

ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರೂ ಅವರು ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಇವರು ಕುಕ್ಕೋಟ್ಟು ಜುಮಾ ಮಸೀದಿಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಇಬ್ಬರು ಪುತ್ರರು, ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.

ಇದು ಅವರ ಕೊನೆಯ ಪುತ್ರಿಯ ವಿವಾಹ ಕಾರ್ಯವಾಗಿತ್ತು. ವಧುವಿನ ತಂದೆ ನಿಧನರಾದ ಕಾರಣ‌ ಹೊಸಂಗಡಿಯಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭವನ್ನು ರದ್ದುಗೊಳಿಸಿ  ಬಳಿಕ ಎರಡು ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಸಂಜೆಯ ವೇಳೆಗೆ ವರನ ಮನೆಯಲ್ಲಿ  ನಿಖಾ‌ಹ್ ನಡೆಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version