ಮಾತು ತಪ್ಪಿದ ಸರ್ಕಾರ: ಶೃಂಗೇರಿಯಲ್ಲಿ ಮತ್ತೆ ಹತ್ತಿಕೊಂಡಿತು ನೂರು ಬೆಡ್ ಗಳ ಆಸ್ಪತ್ರೆಗಾಗಿ ಹೋರಾಟದ ಕಿಚ್ಚು

sringeri
24/11/2022

ಚಿಕ್ಕಮಗಳೂರು: ಶೃಂಗೇರಿಯಲ್ಲಿ  ನೂರು ಬೆಡ್ ಗಳ ಆಸ್ಪತ್ರೆ ಹೋರಾಟಕ್ಕೆ ಮತ್ತೆ ಯುವಕರು ಮುಂದಾಗಿದ್ದು, ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ಧರಣಿ ಸತ್ಯಾಗ್ರಹಕ್ಕೆ ಪ್ರಚಾರ ನೀಡಲು ಮೈಕ್ ಬಳಕೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ತಮಟೆ ಬಡಿದು ಪ್ರಚಾರ ಆರಂಭಿಸಿದ್ದಾರೆ.

ಶೃಂಗೇರಿಯ ಬೀದಿ ಬೀದಿಯಲ್ಲಿ ಸುತ್ತಿ ತಮಟೆ ಪ್ರಚಾರ ಮಾಡುತ್ತಿರುವ ಯುವಕರು, ಅಧಿಕಾರಿಗಳು ಮೈಕ್ ಪ್ರಚಾರಕ್ಕೆ ಅವಕಾಶ ನೀಡದೇ ಇರುವುದನ್ನು ಖಂಡಿಸಿದ್ದಾರೆ.

ಕಳೆದ ವರ್ಷ ಶೃಂಗೇರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಒಂದು ತಿಂಗಳ ಒಳಗಾಗಿ ಆಸ್ಪತ್ರೆ ಮಂಜೂರು ಮಾಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು.  ಜೊತೆಗೆ ಇತ್ತೀಚೆಗೆ  ಶೃಂಗೇರಿ ಭೇಟಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಮಾತು ಕೊಟ್ಟಿದ್ದರು. ಇದೀಗ ಮಾತು ತಪ್ಪಿದ ಸರ್ಕಾರ ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಇದರಿಂದಾಗಿ ಯುವಕರು ಪ್ರತಿಭಟನೆಗೆ ಇಳಿದಿದ್ದಾರೆ.

ಸಮಾನ ಮನಸ್ಕರ ಯುವಕರ ತಂಡ ಇದೀಗ ಹೋರಾಟಕ್ಕೆ ಅಡಿಪಾಯ ಹಾಕಿದ್ದು, ಮೈಕ್ ಬಳಕೆಗೆ ಅವಕಾಶ ನೀಡದೇ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ಬೀದಿಗಳಲ್ಲಿಯೂ ತಮಟೆ ಬಡಿದು, ಪ್ರಚಾರ  ಆರಂಭಿಸಿದ್ದಾರೆ.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version