12:08 PM Thursday 23 - October 2025

ಆರ್.ಎಸ್.ಎಸ್. ದೂರ ಇಟ್ಟರೆ ದೇಶಕ್ಕೆ ನಷ್ಟ: ಸಿ.ಟಿ.ರವಿ

c t ravi
17/10/2025

ಚಿಕ್ಕಮಗಳೂರು:  ಆರ್.ಎಸ್.ಎಸ್. ಚಟುವಟಿಕೆಗೆ ಸರ್ಕಾರ ನಿರ್ಬಂಧ ಹಿನ್ನೆಲೆ  ಚಿಕ್ಕಮಗಳೂರಿನಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಆರ್.ಎಸ್.ಎಸ್. ಇರುವುದು ಜನರ ಮನಸ್ಸಿನಲ್ಲಿ, ದೇಶ ಹಾಳು ಮಾಡುವ ವಿಚಾರ ಆಗಿದ್ರೆ ಸಂಘ ಇಷ್ಟು ದೊಡ್ಡ ಮಟ್ಡಕ್ಕೆ  ಬೆಳೆಯುತ್ತಿರಲಿಲ್ಲ, ಸಂಘದಲ್ಲಿರುವುದು ನಿಸ್ವಾರ್ಥ ದೇಶಪ್ರೇಮ, ಅದು ಬೆಳೆಯುತ್ತಲೇ ಇದೆ, ಕಾಂಗ್ರೆಸ್ ಸೇವಾದಳ ಅದಕ್ಕೂ ನೂರು ವರ್ಷ ಯಾರಾದರೂ ನೆನಪಿಸುತ್ತಾರಾ?, ಗಣ ವೇಶವನ್ನ ಸರಬರಾಜು ಮಾಡಲು ಆಗದಂತಹ ಮಟ್ಟಕ್ಕೆ ಬೇಡಿಕೆ ಬಂದಿದೆ. ಆರ್.ಎಸ್.ಎಸ್.ನಲ್ಲಿ ಕೆಲಸ ಮಾಡುವ ಜನ ದೇಶ ಬಲ ಆಗಬೇಕೆಂದು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.

ಆರ್.ಎಸ್.ಎಸ್. ದೂರ ಇಟ್ಟರೆ ನಷ್ಟ ಯಾರಿಗೆ, ದೇಶಕ್ಕೆ ನಷ್ಟ, ಹರಾಜಕವಾದಿಗಳು, ಭಾರತ್ ತೇರೆ ತುಕಡೆ ಹೂಂಗೆ, ಇನ್ಷಾ ಅಲ್ಲಾ ಅನ್ನೋರು ಲಾಭ ಪಡೆಯುತ್ತಾರೆ, ನಕ್ಸಲರು–ನಗರ ನಕ್ಸಲರು ಇವರಿಗೆ ಆತ್ಮೀಯರಾಗುತ್ತಾರೆ, ದೇಶಭಕ್ತಿಯ ಸಂಘಟನೆ ಕಂಡರೆ ಅಸಹನೆ ಆಗುತ್ತೆ ಅಂದ್ರೆ ಯಾರನ್ನ ದೇಶದ್ರೋಹಿಗಳು ಅನ್ನಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ವಿರೋಧ ಮಾಡುವವರು ದೇಶದ್ರೋಹಿಗಳು, ಬ್ಯಾಲಟ್ ಮೇಲೆ ನಂಬಿಕೆ ಇಲ್ಲದವರು ಪ್ರಜಾಪ್ರಭುತ್ವದ ವಿರೋಧಿಗಳು ಅಂತಾ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version