7:09 PM Saturday 18 - October 2025

ಗ್ಯಾರೆಂಟಿ ಜಾರಿ ನಡುವೆಯೇ ಶುರುವಾಯ್ತೇ ಉರಿ?: ಮುಸ್ಲಿಮರ ಬಗ್ಗೆ ಮತ್ತೆ ಅವಹೇಳನ!

prashanth sambargi
03/06/2023

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರೆಂಟಿಗಳನ್ನೂ ಜಾರಿಗೊಳಿಸಿದೆ.  ಗ್ಯಾರೆಂಟಿಗಳು ಜಾರಿಯಾಗುವುದಿಲ್ಲ ಎನ್ನುವ ನಿರೀಕ್ಷೆಯಲ್ಲಿದ್ದ ಬಿಜೆಪಿ ಪಾಳಯಕ್ಕೆ ಇದೊಂದು ಸಹಿಸಲಾಗದ ತುತ್ತಾಗಿ ಪರಿಣಮಿಸಿದೆ.

ರಾಜ್ಯ ಸರ್ಕಾರ ಗ್ಯಾರೆಂಟಿಗಳನ್ನು ಅಧಿಕೃತವಾಗಿ ಜಾರಿಗೆ ತಂದ ಬಳಿಕ ಬಿಜೆಪಿ ನಾಯಕರು ಮುಸ್ಲಿಮ್ ಸಮುದಾಯದ ಬಗ್ಗೆ ಅವಹೇಳನಾಕಾರಿ ಮಾತುಗಳನ್ನಾಡಲು ಆರಂಭಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ಗೃಹ ಲಕ್ಷ್ಮೀ ಯೋಜನೆಯಲ್ಲಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ  ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದು, ಮುಸ್ಲಿಮರ ಮನೆಯಲ್ಲಿ 2—3 ಹೆಂಡ್ತಿ ಇದ್ದಾರೆ, ಅವರಲ್ಲಿ ಯಜಮಾನಿ ಯಾರು ಎನ್ನುವ ಪ್ರಶ್ನೆ ಹಾಕಿದ್ದಾರೆ.

ಮನೆ ಯಜಮಾನಿ ಯಾರು ಅಂತ ತೀರ್ಮಾನ ಮಾಡಬೇಕಂತೆ, ಮನೆಯೊಳಗೆ ಅತ್ತೆ ಸೊಸೆ ಕೂತು ಈ ತೀರ್ಮಾನ ಮಾಡಲು ಸಾಧ್ಯವೇ ಹಿಂದೂಗಳ ಮನೆಯಲ್ಲಿ ಅತ್ತೆ—ಸೊಸೆ ನಡುವೆ ಯಜಮಾನಿಕೆಗೆ ಪೈಪೋಟಿ ಇರುತ್ತದೆ.  ಮುಸ್ಲಿಮರ ಮನೆಯಲ್ಲಿ ಎರಡು ಹೆಂಡ್ತಿ, ಮೂರು ಹೆಂಡ್ತಿ ಇದ್ದಾರೆ ಅವರಲ್ಲಿ ಯಾರು ಯಜಮಾನಿ ಆಗ್ತಾರೆ ಎಂದು ಪ್ರಶ್ನಿಸಿದ್ದಾರೆ.

ಇತ್ತ ಬಿಗ್ ಬಾಸ್ ಸ್ಪರ್ಧಿ ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರ್ಗಿ ತಮ್ಮ ಫೇಸ್ ಬುಕ್ ನಲ್ಲಿ ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಬರೆದುಕೊಂಡಿದ್ದು,  “ಮುಲ್ಲನ 4 ಜನ ಹೆಂಡತಿಯರಿಗೆ ತಲಾ ಎರಡು ಸಾವಿರ ಕೊಟ್ಟ ಸರ್ಕಾರಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಅಂದ ಹಾಗೆ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರೆಂಟಿಗಳು ಕೂಡ ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೇ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು. ಆದ್ರೆ, ಸೋಲಿನ ಹತಾಶೆಯ ನಡುವೆಯೇ ಬಿಜೆಪಿ ನಾಯಕರು ಮತ್ತೆ ಮುಸ್ಲಿಮರ ಅವಹೇಳನಾ ಆರಂಭಿಸಿದ್ದಾರೆ ಅನ್ನೋ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version