2:59 PM Friday 11 - September 2026

ನಾಳೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ |  ಲಿಸ್ಟ್ ನಲ್ಲಿರುವವರು ಯಾರ್ಯಾರು..? ಇಲ್ಲಿದೆ ಸಂಭಾವ್ಯ ಪಟ್ಟಿ

congress
16/03/2023

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ಚುರುಕುಗೊಂಡಿದ್ದು ನಾಳೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ನ 135 ಅಭ್ಯರ್ಥಿಗಳ ಮೊದಲ ಪಟ್ಟಿ ಹೊರಬೀಳುವ ನಿರೀಕ್ಷೆ ಇದ್ದು ಇದಕ್ಕೆ ಪೂರಕವೆಂಬತೆ ಎಂಬಂತೆ ಸ್ಕ್ರೀನಿಂಗ್ ಕಮಿಟಿಯಿಂದ ಹೈಕಮಾಂಡ್‌ಗೆ ಕಳುಹಿಸಲಾಗಿರುವ ಅಭ್ಯರ್ಥಿಗಳ ಪಟ್ಟಿ ಲಭ್ಯವಾಗಿದೆ. ಈ ಪಟ್ಟಿಯಲ್ಲಿ 66 ಕ್ಷೇತ್ರಗಳಿಗೆ ಸಿಂಗಲ್ ಹೆಸರು ಹಾಕಿ ಲಿಸ್ಟ್ ಕಳುಹಿಸಲಾಗಿದೆ. ಬಹುತೇಕ 66 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತಲೆ ಬಿಸಿ ಇಲ್ಲ. ಈ ಪಟ್ಟಿಗೆ ಕಾಂಗ್ರೆಸ್​ ಕೇಂದ್ರ ಚುನಾವಣಾ ಸಮಿತಿ ಗ್ರೀನ್​ ಸಿಗ್ನಲ್​ ನೀಡಿದರೆ ಮೊದಲ ಹಂತದಲ್ಲಿ 135 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನುಳಿದ 89 ಕ್ಷೇತ್ರಗಳಲ್ಲಿ ಎರಡೆರಡು ಹೆಸರು ಶಿಫಾರಸು ಮಾಡಲಾಗಿದೆ

ಸೊರಬ –-ಮಧು ಬಂಗಾರಪ್ಪ, ಚಿತ್ರದುರ್ಗ –- ವೀರೇಂದ್ರ ಪಪ್ಪಿ, ಹಿರಿಯೂರು –ಸುಧಾಕರ್, ಹಿರೇಕೆರೂರು –- ಯುಬಿ ಬಣಕಾರ್, ವಿರಾಜಪೇಟೆ –- ಪೊನ್ನಣ್ಣ, ಬಸವನಗುಡಿ– ಯುಬಿ ವೆಂಕಟೇಶ್, ರಾಜಾಜಿನಗರ– ಪುಟ್ಟಣ್ಣ,  ರಾಮನಗರ –- ಇಕ್ಬಾಲ್ ಹುಸೇನ್, ಮಾಗಡಿ – -ಬಾಲಕೃಷ್ಣ, ಹೊಸಕೋಟೆ– ಶರತ್ ಬಚ್ಚೇಗೌಡ, ನಿಪ್ಪಾಣಿ –- ಕಾಕಾಸಾಹೇಬ್ ಪಾಟೀಲ್, ಹುಕ್ಕೇರಿ –- ಎ.ಬಿ ಪಾಟೀಲ್ , ಗೋಕಾಕ್ –- ಅಶೋಕ್ ಪೂಜಾರಿ, ಹುನಗುಂದ –- ವಿಜಯಾನಂದ ಕಾಶಪ್ಪನವರ್, ಮುದ್ದೇಬಿಹಾಳ –- ಸಿ.ಎಸ್ ನಾಡಗೌಡ, ರಾಯಚೂರು –- ಎನ್.ಎಸ್ ಬೋಸರಾಜ್, ಕನಕಗಿರಿ –- ಶಿವರಾಜ್ ತಂಗಡಗಿ , ಯಲಬುರ್ಗಾ –- ಬಸವರಾಜ್ ರಾಯರೆಡ್ಡಿ,

ಚಿಂತಾಮಣಿ –- ಎಂಸಿ ಸುಧಾಕರ್, ಚಿಕ್ಕಬಳ್ಳಾಪುರ –- ಕೊತ್ತೂರ್ ಮಂಜುನಾಥ್, ಬೈಂದೂರು –- ಗೋಪಾಲ್ ಪೂಜಾರಿ, ಕೋಲಾರ –- ಸಿದ್ದರಾಮಯ್ಯ, ಕಾಪು –- ವಿನಯ್ ಕುಮಾರ್ ಸೊರಕೆ, ಕಡೂರು –- ವೈಎಸ್‌ವಿ ದತ್ತಾ, ಟಿ. ನರಸಿಪುರ –- ಸುನಿಲ್ ಬೋಸ್, ಕಾರವಾರ –- ಸತೀಶ್ ಸೈಲ್, ಭಟ್ಕಳ –- ಮಂಕಾಳ ವೈದ್ಯ, ಹಾನಗಲ್ -– ಶ್ರೀನಿವಾಸ್ ಮಾನೆ,

ಒಂದು ಕ್ಷೇತ್ರಕ್ಕೆ ಎರಡು ಹೆಸರುಗಳು ಇರುವ ಪಟ್ಟಿ ಹೀಗಿದೆ.

ಬೆಳಗಾವಿ ಉತ್ತರ –- ಫೀರೋಜ್ ಸೇಠ್/ ಆಸೀಫ್ ಸೇಠ್, ಕುಡಚಿ –- ಶ್ಯಾಮ್ ಭೀಮ್ ಘಾಟ್ಗೆ/ ಮಹೇಂದ್ರ ತಮ್ಮಣ್ಣ, ಕಾಗವಾಡ –- ರಾಜೂ ಕಾಗೆ/ ದಿಗ್ವಿಜಯ್ ದೇಸಾಯಿ, ಅಥಣಿ –- ಗಜಾನನ್ ಮಂಗಸೂಳಿ/ ಶ್ರೀಕಾಂತ್ ಪೂಜಾರಿ, ನಂಜನಗೂಡು –- ಮಹದೇವಪ್ಪ/ ದ್ರುವನಾರಾಯಣ(ದರ್ಶನಗೆ ಫೈನಲ್​), ‌ಹೊಳಲ್ಕೆರೆ –- ಸವಿತಾ ರಘು/ ಆಂಜನೇಯ, ತೀರ್ಥಹಳ್ಳಿ –- ಕಿಮ್ಮನೆ ರತ್ನಾಕರ್/ ಮಂಜುನಾಥ್ ಗೌಡ, ಬಳ್ಳಾರಿ ಸಿಟಿ –- ಅಲ್ಲಂ ಪ್ರಶಾಂತ್/ ಅನಿಲ್ ಲಾಡ್, ಶಿಗ್ಗಾಂವಿ –- ಅಜಂಪೀರ್ ಖಾದ್ರಿ/ ಸೋಮಣ್ಣ ಬೇವಿನಮರದ, ಗಂಗಾವತಿ –- ಇಕ್ಬಾಲ್ ಅನ್ಸಾರಿ/ ಎಚ್.ಆರ್ ಶ್ರೀನಾಥ್, ಕಲಬುರಗಿ ಗ್ರಾಮೀಣ –- ರೇವುನಾಯಕ ಬೆಳಮಗಿ/ ವಿಜಯಕುಮಾರ್, ತೇರದಾಳ್ –- ಉಮಾಶ್ರೀ/ ಮಲ್ಲೇಶಪ್ಪ, ಬಾಗಲಕೋಟ –- ಎಚ್ ವೈ ಮೇಟಿ/ ದೇವರಾಜ್ ಪಾಟೀಲ್, ಚಾಮುಂಡೇಶ್ವರಿ –- ಮರಿಗೌಡ/ ಚಂದ್ರಶೇಖರ್, ಮಂಗಳೂರು ದಕ್ಷಿಣ –- ಐವಾನ್ ಡಿಸೋಜಾ/ ಜೆ.ಆರ್. ಲೋಬೋ, ಬೆಳ್ತಂಗಡಿ–ರಕ್ಷಿತ್ / ಶಿವರಾಂ, ಬೆಂಗಳೂರು ದಕ್ಷಿಣ–ಆರ್ ಕೆ ರಮೇಶ್/ ಸುಷ್ಮಾ ರಾಜಗೋಪಾಲ್, ದಾಸರಹಳ್ಳಿ– ಕೃಷ್ಣಮೂರ್ತಿ/ ಸಿ.ಎಂ. ಧನಂಜಯ, ಕಲಘಟಗಿ –- ಸಂತೋಷ್ ಲಾಡ್/ ನಾಗರಾಜ್ ಚಬ್ಬಿ, ಕುಂದಗೋಳ –- ಕುಸುಮಾ ಶಿವಳ್ಳಿ, ಶಾಸಕಿ/ ಚಂದ್ರಶೇಖರ್ ಜತ್ತಲ್, ದೊಡ್ಡಬಳ್ಳಾಪುರ –- ವೆಂಕಟರಮಣಯ್ಯ, ಶಾಸಕ/ ಬಿಸಿ ಆನಂದ್, ಪಾವಗಡ -– ವೆಂಕಟರಮಣಪ್ಪ, ಶಾಸಕ/ಎಚ್.ವಿ ವೆಂಕಟೇಶ್, ಲಿಂಗಸುಗೂರು -– ಡಿ‌ಎಸ್ ಹೂಲಗೇರಿ/ರುದ್ರಯ್ಯ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version