ಮಂಗಳೂರು: ಶಿಕ್ಷಕರ ನೇಮಕಾತಿ | ಜಾತಿ, ಆದಾಯ ಪ್ರಮಾಣ ಪತ್ರ ಸಲ್ಲಿಕೆಗೆ ಅವಕಾಶ
ಮಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದದ (PST–ಸಾಮಾನ್ಯ, ಶಿಕ್ಷಕ (1 ರಿಂದ 5ನೇ ತರಗತಿ) PE– ಗ್ರೇಡ್–1 (1 ರಿಂದ 8ನೇ ತರಗತಿ) GPT (6 ರಿಂದ 8ನೇ ತರಗತಿ), CST (1-8ನೇ ತರಗತಿ) ಶಿಕ್ಷಕರ ಹುದ್ದೆಗಳಿಗೆ ಹಾಗೂ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಸಹ ಶಿಕ್ಷಕರ (AM) ವೃಂದ, ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್–1 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾ ವಿಭಾಗವಾರು ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು.
ಅಧಿಸೂಚನೆಗಳಲ್ಲಿ ಪ್ರವರ್ಗ- II(a), II(b), III(a), ಮತ್ತು III(b), ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು ನಮೂನೆ–ಎಫ್‌ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಲು ತಿಳಿಸಲಾಗಿತ್ತು. ಆದರೆ ವಿವಾಹಿತ ಮಹಿಳಾ, ಪುರುಷ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸುವ ಸಂಬಂಧ ಸ್ಪಷ್ಟೀಕರಣ ಕೋರಿರುತ್ತಾರೆ. ಅದರಂತೆ ಆಯಾ ಜಿಲ್ಲಾ/ವಿಭಾಗವಾರು ಅಧಿಸೂಚನೆಗಳಿಗೆ ಸ್ಪಷ್ಟೀಕರಣವನ್ನು ನೀಡಿರುವ ಸೇರ್ಪಡೆ ಅಧಿಸೂಚನೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಹೊರಡಿಸಿದೆ. ಸೇರ್ಪಡೆ ಅಧಿಸೂಚನೆಗಳನ್ನು ಇಲಾಖಾ ವೆಬ್ ಸೈಟ್ https://schooleducation.karnataka.gov.in/cacell/en ನಲ್ಲೂ ಪ್ರಕಟಿಸಿದೆ. ಇತರ ಹಿಂದುಳಿದ ವರ್ಗಗಳಾದ, ಪ್ರವರ್ಗ II(a), II(b), III(a), III(b), ವರ್ಗಗಳಿಗೆ ಸೇರಿದ ವಿವಾಹಿತ ಮಹಿಳಾ, ಪುರುಷ ಅಭ್ಯರ್ಥಿಗಳು ಸೇರ್ಪಡೆ ಅಧಿಸೂಚನೆಯಂತೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸದೆ ಆನ್ ಲೈನ್ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನಿಯಮದಂತೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಸದಾಗಿ ಅಪ್ ಲೋಡ್ ಮಾಡಲು ಆನ್ ಲೈನ್ ಅರ್ಜಿಯಲ್ಲಿ ಎಡಿಟ್ ಗೆ ಅವಕಾಶ ನೀಡಿದೆ. ಅರ್ಜಿ ಸಲ್ಲಿಸಲು ಸೆ.25 ಹಾಗೂ ಪಾವತಿಸಿದ ಶುಲ್ಕ ಇತ್ಯರ್ಥಪಡಿಸಿಕೊಳ್ಳಲು ಸೆ.28 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಅಭ್ಯರ್ಥಿಗಳು ಎಡಿಟ್ ಆಯ್ಕೆಯನ್ನು ಬಳಸಿಕೊಂಡು ನಿಯಮದಂತೆ ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಅಪ್ ಲೋಡ್ ಮಾಡಬೇಕು ಹಾಗೂ ಇತರ ಮಾಹಿತಿಳ ತಿದ್ದುಪಡಿ ಇದ್ದಲ್ಲಿ, ಅವುಗಳನ್ನು ಸರಿಪಡಿಸಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ ಪ್ರಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು. ಕೇಂದ್ರೀಕೃತ ದಾಖಲಾತಿ ಘಟಕ ಸಹಾಯವಾಣಿ ಸಂ.: 080–22483145, 22483140, 22271866, 9483024723 ಹಾಗೂ ಕಚೇರಿಯ ಇ-ಮೇಲ್ ವಿಳಾಸ: cackarnataka1@gmail.com ಸಂಪರ್ಕಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























