ಆತ್ಮರಕ್ಷಣೆಗಾಗಿ ಚಿರತೆಯನ್ನು ಕೊಂದ್ರಾ ಅರಣ್ಯ ಅಧಿಕಾರಿಗಳು! : ನರಹಂತಕ ಚಿರತೆ ಬಲಿಯಾಗಿದ್ದು ಹೇಗೆ?
ತರೀಕೆರೆ: ಚಿರತೆ ಸೆರೆ ವೇಳೆ ಆತ್ಮರಕ್ಷಣೆಗೆಂದು ಅಧಿಕಾರಿಗಳು ಹಾರಿಸಿದ ಗುಂಡಿನಿಂದ ಚಿರತೆ(Leopard) ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು(Chikmagalur) ಜಿಲ್ಲೆ ತರೀಕೆರೆ ತಾಲೂಕಿನ ಭೈರಾಪುರ ಗ್ರಾಮದಲ್ಲಿ ನಡೆದಿದೆ.
ಆದರೆ, ಇದು ಅಧಿಕಾರಿಗಳೇ ಮಾಡಿದ ಕೊಲೆ ಎಂದು ಪ್ರಾಣಿಪ್ರಿಯರು ಹಾಗೂ ಪರಿಸರವಾದಿಗಳು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆ ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಮನೆ ಬಳಿಯಿದ್ದ 11 ವರ್ಷದ ಬಾಲಕ ಮೇಲೆ ಚಿರತೆ ದಾಳಿ ಮಾಡಿತ್ತು. ತೀವ್ರ ಗಾಯಗೊಂಡಿದ್ದ ಬಾಲಕನನ್ನು ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 11 ವರ್ಷದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದನು.
ನಂತರ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಮುಂದಾಗಿತ್ತು. ಇಂದು ಬೈರಾಪುರ ಗ್ರಾಮದಲ್ಲಿ ಚಿರತೆ ಇರುವುದನ್ನ ಖಚಿತ ಪಡಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೇರಿಗೆ ಮುಂದಾಗಿದ್ದರು. ಈ ವೇಳೆ ಗಿಡ–ಘಂಟೆಗಳ ಮಧ್ಯೆಯಿಂದ ಚಿರತೆ ಹಾರಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಆತ್ಮ ರಕ್ಷಣೆಗಾಗಿ ಚಿರತೆಯ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ, ಚಿರತೆ ತಪ್ಪಿಸಿಕೊಂಡಿತ್ತು. ಅಧಿಕಾರಿಗಳು ಚಿರತೆಗಾಗಿ ಹುಡುಕಾಡಿದ ಮೇಲೆ ಚಿರತೆಯ ಮೃತದೇಹ ಪತ್ತೆಯಾಗಿತ್ತು.
ಚಿರತೆಯ ದೇಹದ ಮೇಲೆ ಗುಂಡಿನ ಗುರುತು ಇದ್ದು, ಇದು ಅಧಿಕಾರಿಗಳೇ ಮಾಡಿದ ಕೊಲೆ ಎಂದು ಸ್ಥಳೀಯರು, ಪ್ರಾಣಿ ಪ್ರಿಯರು ಹಾಗೂ ಪರಿಸರವಾದಿಗಳು ಆರೋಪಿಸಿದ್ದಾರೆ. ಕಳೆದ ಒಂದು ವಾರದ ಹಿಂದಷ್ಟೇ ತರೀಕೆರೆ ತಾಲೂಕಿನ ಮುಂಡ್ರೆ ಗ್ರಾಮದ ಬಳಿ ಕೊಟ್ಟಿಗೆಯಲ್ಲಿದ್ದ 5 ವರ್ಷದ ಬಾಲಕಿಯನ್ನು ಚಿರತೆ ಹೊತ್ತೊಯ್ದಿತ್ತು. ನಿನ್ನೆ ಮತ್ತೊಬ್ಬ ಯುವಕನ ಮೇಲೆ ದಾಳಿ ಮಾಡಿದ್ದು ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ರೈತರು ಚಿರತೆ ಹಾವಳಿಯಿಂದ ಹೈರಾಣಾಗಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























