1:19 AM Wednesday 20 - August 2025

ಕ್ರೀಡಾ ಸ್ಪರ್ಧೆಯಲ್ಲಿ ಮುಸ್ಲಿಂ ಮಹಿಳೆಯರು ಶಿರವಸ್ತ್ರ ಧರಿಸುವುದಕ್ಕೆ ಫ್ರಾನ್ಸ್ ನಿಷೇಧ: ವಿಶ್ವಸಂಸ್ಥೆಯಿಂದ ತೀವ್ರ ಖಂಡನೆ

29/10/2024

ಕ್ರೀಡಾ ಸ್ಪರ್ಧೆಯಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಶಿರವಸ್ತ್ರ ಧರಿಸುವುದಕ್ಕೆ ನಿಷೇಧ ವಿಧಿಸಿರುವ ಫ್ರಾನ್ಸ್ ನೀತಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ತಜ್ಞರು ತೀವ್ರವಾಗಿ ಖಂಡಿಸಿದ್ದಾರೆ. ಫ್ರಾನ್ಸಿನಲ್ಲಿ ನಡೆದ 2024ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿತ್ತು. ಫ್ರಾನ್ಸ್ ನ ಫುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ಫೆಡರೇಶನ್ ಕೂಡ ಶಿರವಸ್ತ್ರ ಧರಿಸುವ ಸ್ಪರ್ಧಾಳುಗಳುಗಳಿಗೆ ನಿಷೇಧವನ್ನು ಹೇರಿತ್ತು.

ಈ ನಿಷೇಧವು ಪಕ್ಷಪಾತಿತನದ್ದಾಗಿದೆ. ಮುಸ್ಲಿಂ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಿ ಸಾಂಸ್ಕೃತಿಕ ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ಫ್ರೆಂಚ್ ಸರಕಾರ ಅನುಮತಿ ನೀಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಫ್ರಾನ್ಸ್ ನ ಸೆಕ್ಯೂರಿಸಂ ನೀತಿಯು ಧರ್ಮಗಳ ಕುರಿತಂತೆ ತಟಸ್ಥ ನಿಲುವನ್ನು ಪ್ರಕಟಿಸುತ್ತಿದ್ದು ಧಾರ್ಮಿಕ ಕಾರ್ಯಗಳನ್ನು ನಡೆಸುವ ನಾಗರಿಕರ ಹಕ್ಕುಗಳನ್ನು ಗೌರವಿಸುವುದಾಗಿಯೂ ಹೇಳುತ್ತಿದೆ. ಆದರೆ ನಾಗರಿಕರು ಸಾರ್ವಜನಿಕವಾಗಿ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸುವ ರೀತಿಯ ಉಡುಪು ಧಾರಣೆಯನ್ನು ಅದು ವಿರೋಧಿಸುತ್ತಿದೆ.

ಇದು ಸೆಕ್ಯುಲರಿಸಂ ನ ಹೆಸರಲ್ಲಿ ಮಾಡುತ್ತಿರುವ ವಿರೋಧಾಬಸವಾಗಿದ್ದು, ಈ ನೀತಿ ವೈರುಧ್ಯತೆಯಿಂದ ಕೂಡಿದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಹಿಜಾಬ್ ಧರಿಸಿದ ಕ್ರೀಡಾಳುಗಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಫ್ರಾನ್ಸ್ ಅನುಮತಿ ನೀಡಿರಲಿಲ್ಲ. ಆದರೆ ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ನಿಯಮವು ಹಿಜಾಬ್ ಧರಿಸಿದ ಮಹಿಳೆಯರಿಗೆ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version