ಮಂಗಳೂರಿನಲ್ಲಿ ರಸ್ತೆಯಲ್ಲೇ ಸೌಹಾರ್ದ ಇಫ್ತಾರ್ ಕೂಟ: ವಿಡಿಯೋ ವೈರಲ್

ifthar
30/03/2024

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಪ್ರದೇಶದಲ್ಲಿ ರಸ್ತೆಯಲ್ಲೇ ಇಫ್ತಾರ್ ಕೂಟ ಆಯೋಜಿಸಿರುವ ವಿಡಿಯೋವೊಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಸ್ತೆಯ ಒಂದು ಬದಿಯನ್ನು ತಡೆದು ಇಫ್ತಾರ್ ಕೂಟ ಆಯೋಜಿಸಲಾಗಿದೆ.  ಮುಡಿಪು ಜಂಕ್ಷನ್ ನಲ್ಲಿ ಆಟೋ ರಾಜಕನ್ಮಾರ್ ಎಂಬ ಸಂಘಟನೆ ಈ ಇಫ್ತಾರ್ ಕೂಟವನ್ನು ಆಯೋಜಿಸಿದೆ ಎಂದು ಹೇಳಲಾಗಿದೆ.

ಇದೊಂದು ಸೌಹಾರ್ದಯುತ ಇಫ್ತಾರ್ ಕೂಟವಾಗಿ ಆಯೋಜಿಸಲಾಗಿದ್ದು, ರಿಕ್ಷಾ ಚಾಲಕರು, ವರ್ತಕರು ಈ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು.

ರಂಜಾನ್ ಉಪವಾಸದ ಹಿನ್ನೆಲೆ ಈ ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.  ಈ ಹಿಂದೆ ಇಲ್ಲಿನ ಸಭಾಂಗಣವೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಆದರೆ ಇತರ ಸಮುದಾಯದ ಜನರಿಗೆ ಇಫ್ತಾರ್ ಕೂಟದಲ್ಲಿ ಭಾಗಿಯಾಗಲು ಸಹಕಾರಿಯಾಗಲಿ ಎನ್ನುವ ನಿಟ್ಟಿನಲ್ಲಿ ರಸ್ತೆಯ ಒಂದು ಬದಿಯಲ್ಲಿ ಅವಕಾಶ ಮಾಡಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಹೇಳಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version