ಬಹಿರಂಗ: ಮುಂಬೈ ಇಂಡಿಯನ್ಸ್ ತಂಡದ ಒಳಗಡೆ ಎಲ್ಲವೂ ಸರಿ ಇಲ್ಲ ಎನ್ನುವುದು ಕೊನೆಗೂ ಬಯಲು..!

29/03/2024

ಸತತ ಎರಡು ಸೋಲುಗಳನ್ನು ಅನುಭವಿಸಿದ ಮುಂಬೈ ಇಂಡಿಯನ್ಸ್ ತಂಡದ ಒಳಗಡೆ ಎಲ್ಲವೂ ಸರಿ ಇಲ್ಲ ಎನ್ನುವುದು ಬಹಿರಂಗವಾಗಿದೆ. ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ಶಿಪ್ ಕೊಟ್ಟ ಬಳಿಕ ತಂಡ ಇಬ್ಬಾಗವಾಗಿದೆ. ಒಂದು ಗುಂಪು ರೋಹಿತ್ ಶರ್ಮ ಜೊತೆ ನಿಂತರೆ, ಇನ್ನೊಂದು ಗುಂಪು ಹಾರ್ದಿಕ ಪಾಂಡ್ಯ ಜೊತೆ ನಿಂತಿದ್ದು ತಂಡ ಸ್ಪಷ್ಟವಾಗಿ ಇಬ್ಬಾಗವಾಗಿದೆ ಎಂದು ತಿಳಿದು ಬಂದಿದೆ.

ಮುಂಬೈ ಇಂಡಿಯನ್ಸ್ ಗೆ 5 ಬಾರಿ ಐಪಿಎಲ್ ಕಿರೀಟವನ್ನು ದೊರಕಿಸಿ ಕೊಟ್ಟಿದ್ದ ರೋಹಿತ್ ಶರ್ಮರನ್ನು ಕ್ಯಾಪ್ಟನ್ ಶಿಪ್‌ನಿಂದ ಹೊರ ಹಾಕಲಾಗಿತ್ತು ಮತ್ತು ಗುಜರಾತ್ ಟೈಟನ್ಸ್ ನ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ನ ಕ್ಯಾಪ್ಟನ್ ಆಗಿ ನೇಮಿಸಲಾಗಿತ್ತು.

ಇದು ಮುಂಬೈ ಇಂಡಿಯನ್ಸ್ ಅಭಿಮಾನಿಗಳಲ್ಲಿ ಭಾರಿ ಆಕ್ರೋಶಕ್ಕೆ ತುತ್ತಾಗಿದೆ. ಇದೀಗ ಎರಡು ಪಂದ್ಯಗಳಲ್ಲೂ ಮುಂಬೈ ಇಂಡಿಯನ್ಸ್ ಪರಾಜಯ ಹೊಂದಿದ್ದು ತಂಡದಲ್ಲಿ ಬಿರುಕಿಗೂ ಕಾರಣವಾಗಿದೆ. ಜಸ್ ಪ್ರೀತ್ ಬೂಮ್ರ, ತಿಲಕ್ ವರ್ಮ ಮುಂತಾದವರು ರೋಹಿತ್ ಶರ್ಮ ಜೊತೆಗಿದ್ದರೆ ಹಾರ್ದಿಕ ಪಾಂಡ್ಯವನ್ನು ಮ್ಯಾನೇಜ್ಮೆಂಟ್ ಬೆಂಬಲಿಸುತ್ತಿದೆ. ಹಾಗೆಯೇ ಇಶಾನ್ ಕಿಶನ್ ಕೂಡ ಬೆಂಬಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹಾರ್ದಿಕ್ ಪಾಂಡ್ಯ ವರ್ತನೆ ಡ್ರೆಸ್ಸಿಂಗ್ ರೂಮ್ ಮತ್ತು ಗ್ರೌಂಡಿನಲ್ಲಿ ತೀವ್ರ ಪ್ರಶ್ನೆಗೆ ಒಳಗಾಗುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version