1:11 PM Wednesday 15 - October 2025

ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ ಬಿಜೆಪಿ ಕಾರ್ಯಕರ್ತರು!

bjp
18/08/2021

ಯಾದಗಿರಿ: ಬಿಜೆಪಿಯ ಜನಾರ್ಶೀವಾದ ಯಾತ್ರೆಯ ಹಿನ್ನೆಲೆಯಲ್ಲಿ  ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಸ್ವಾಗತಿಸುವ ವೇಳೆ ಬಿಜೆಪಿ ಕಾರ್ಯಕರ್ತರು ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಸ್ವಾಗತಿಸುವ ಸಂದರ್ಭ ಗಾಳಿಯಲ್ಲಿ ಗುಂಡು ಹಾರಿಸಲಾಗಿದ್ದು, ಜಿಲ್ಲೆಯ ಗಡಿ ಗ್ರಾಮ ಯರಗೋಳದಲ್ಲಿ ಸಚಿವರನ್ನು ಮೆರವಣಿಗೆ ಮೂಲಕ ಭರ್ಜರಿಯಾಗಿ ಸ್ವಾಗತಿಸಲು ಮುಂದಾದ ಬಿಜೆಪಿ ಕಾರ್ಯಕರ್ತರು ಗಾಳಿಯಲ್ಲಿ ಗುಂಡು ಹಾರಿಸಿ ಕೆಲಕಾಲ ಆತಂಕ ಸೃಷ್ಟಿಸಿದರು.

ಘಟನೆ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಮಾಹಿತಿ ದೊರೆತಿಲ್ಲ. ಸದ್ಯ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನಷ್ಟು ಸುದ್ದಿಗಳು…

ತನ್ನ ಬಗ್ಗೆ ತಾನೇ ಪುಸ್ತಕ ಬರೆದುಕೊಂಡು ಸ್ವಾತಂತ್ರ್ಯ ಹೋರಾಟಗಾರನಾದ ಸಾರ್ವರ್ಕರ್ | ಶಾಫಿ ಬೆಳ್ಳಾರೆ

ಬೇಲ್ ಮೇಲೆ ಜೈಲಿನಿಂದ ಬಂದಿದ್ದಾತ ಪತ್ನಿಯನ್ನು ಕೊಂದ | ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

ಅಫ್ಘಾನಿಸ್ತಾನ ಸಂಕಷ್ಟದ ಬೆನ್ನಲ್ಲೇ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

ಸಾರ್ವರ್ಕರ್ ಗಲಾಟೆ: ಎಸ್ ಡಿಪಿಐ ಮತ್ತು ಬಿಜೆಪಿಯ ಒಳ ಒಪ್ಪಂದದ ಕಾರ್ಯಕ್ರಮ | ಹಿಂದೂ ಮಹಾಸಭಾ ಆಕ್ರೋಶ

ಶಿಕ್ಷೆಗೊಳಗಾಗಲು ದೇಶದ್ರೋಹ ಮಾಡಬೇಕಿಲ್ಲ, ಹೆಣ್ಣಾಗಿ ಹುಟ್ಟಿದರೆ ಸಾಕು | ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಜೀವ ಭಯದಲ್ಲಿ!

ಇತ್ತೀಚಿನ ಸುದ್ದಿ

Exit mobile version