10:16 PM Saturday 23 - August 2025

ನನ್ನ ಮಕ್ಕಳ ಹಸಿವನ್ನು ತಣಿಸಬೇಕು: ಗಾಝಾದ ಮೀನುಗಾರ ಜಲಾಲ್ ಕರಾಂ ಭಾವುಕ ನುಡಿ

30/03/2024

ನನ್ನ ಮಕ್ಕಳ ಹಸಿವನ್ನು ತಣಿಸಬೇಕು. ಇಸ್ರೇಲ್ ನ ಬಂದೂಕು ಶೆಲ್ಲು ಮತ್ತು ಬಾಂಬುಗಳು ನನ್ನ ಹಿಂದಿವೆ ಎಂಬುದು ಗೊತ್ತು. ನನ್ನ ಬದುಕು ಕೊನೆಗೊಂಡರೂ ಸರಿ, ನಾನು ಸಮುದ್ರಕ್ಕೆ ಹೋಗುವೆ. ನೀನು ಹಿಡಿಯುವೆ. ಯಾಕೆಂದರೆ ನನ್ನ ಮಕ್ಕಳ ಹಸಿವನ್ನು ತಣಿಸುವುದು ನನ್ನ ಜೀವಕ್ಕಿಂತಲೂ ದೊಡ್ಡದು ಎಂದು ಗಾಝಾದ ಮೀನುಗಾರ ಜಲಾಲ್ ಕರಾಂ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ನಾನು ಹತ್ಯೆಗೀಡಾದರೂ ಚಿಂತಿಲ್ಲ, ನನ್ನ ಮಕ್ಕಳ ಹಸಿವನ್ನು ತಣಿಸುವುದಕ್ಕಾಗಿ ಕೊನೆಯವರೆಗೂ ಹೋರಾಡುವೆ ಎಂದವರು ಭಾವುಕವಾಗಿ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಬಾಂಬ್ ಮತ್ತು ಬಂದೂಕನ್ನು ಬಳಸಿ ಫೆಲೆಸ್ತೀನಿಯರನ್ನು ಹತ್ಯೆ ಮಾಡುತ್ತಿರುವ ಇಸ್ರೇಲಿ ಸೇನೆ ಬುಲ್ಡೋಜರ್ ಗಳ ಮೂಲಕ ಅವರ ಮನೆಯನ್ನೂ ಕೆಡವುತ್ತಿದೆ. ಮಾತ್ರವಲ್ಲ ಹಸಿವನ್ನೇ ಆಯುಧವನ್ನಾಗಿ ಬಳಸಿಕೊಳ್ಳುತ್ತಿದೆ. ಆಸ್ಪತ್ರೆಗಳು ಮತ್ತು ನಿರಾಶ್ರಿತ ಕೇಂದ್ರಗಳಲ್ಲಿ ಹಸಿವಿನಿಂದ ಸಾಯುತ್ತಿರುವ ಮಕ್ಕಳು ಮತ್ತು ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿಯಾಗುತ್ತಿದೆ. ಇದೀಗ ಬೇರೆ ದಾರಿ ಕಾಣದೇ ಜಲಾಲ್ ಖರಾನ್ ಅವರಂತೆ ಅನೇಕ ಮಂದಿ ಸಾವಿನ ಭಯವನ್ನೂ ಲೆಕ್ಕಿಸದೆ ಸಮುದ್ರಕ್ಕೆ ಇಳಿದಿದ್ದಾರೆ. ಯುದ್ದಕ್ಕಿಂತ ಮೊದಲು ಈ ಜಲಾಲ್ ಕರಾನ್ ಅವರು ತಮ್ಮ ಪುಟ್ಟ ದೋಣಿಯಲ್ಲಿ ಸಮುದ್ರದಲ್ಲಿ ಸಾಕಷ್ಟು ದೂರ ಸಾಗಿ ಮೀನು ಹಿಡಿದಿದ್ದರು. ಇದೀಗ ಹಾಗೆ ಹೋಗುವಂತಿಲ್ಲ. ಇಸ್ರೇಲ್ ಯೋಧರ ಕಣ್ಣು ತಪ್ಪಿಸಿ ಒಂದಷ್ಟು ದೂರ ಚಲಿಸಿ ಮೀನು ಹಿಡಿಯಬೇಕಾದ ಅನಿವಾರ್ಯತೆ ಎದುರಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version