ರಾತ್ರಿ ಊಟ ಮಾಡಿ ಮಲಗಿದ್ದ ಯುವತಿ ಮಲಗಿದಲ್ಲೇ ಸಾವು

30/08/2023
ದಕ್ಷಿಣ ಕನ್ನಡ: ಯುವತಿಯೋರ್ವಳು ಮಲಗಿದ್ದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಗ್ಗ ಸಮೀಪದ ಮದ್ವ ಎಂಬಲ್ಲಿ ನಡೆದಿದೆ.
ಮಿತ್ರ ಶೆಟ್ಟಿ (23) ಮೃತಪಟ್ಟ ಯುವತಿ. ರಾತ್ರಿ ಊಟ ಮಾಡಿ ಮಲಗಿದ ಯುವತಿ ಬೆಳಗ್ಗೆ ನೋಡುವಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಾವಿಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ಈಕೆಯ ತಂದೆ ಮತ್ತು ಸಹೋದರ ಇಬ್ಬರೂ ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಕಾರಣ ಮಿತ್ರ ಮತ್ತು ಈಕೆಯ ತಾಯಿ ಪ್ರಸ್ತುತ ಕಾವಳಪಡೂರು ಗ್ರಾಮದ ಮದ್ವ ಕಂಬಲಡ್ಡದ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದರು.
ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದವಳು ಬೆಳಿಗ್ಗೆ ಎದ್ದು ನೋಡುವಾಗ ಎದ್ದೇಳದೇ, ಮಾತನಾಡದೇ ಇದ್ದಾಗ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ವೇಳೆ ಮೃತಪಟ್ಟಿದ್ದಾಳೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.