1:11 AM Sunday 14 - September 2025

ಶಬರಿಮಲೆಯಲ್ಲಿ ಕುಸಿದು ಬಿದ್ದು ಬಾಲಕಿ ಸಾವು: ಪೋಷಕರ ಭಕ್ತಿಗೆ ಬಾಲಕಿಯ ಜೀವ ಬಲಿ

shabarimale
13/12/2023

ಪಟ್ಟಣಂತಿಟ್ಟ:  ಶಬರಿಮಲೆ ದೇಗುಲದಲ್ಲಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ತಮಿಳುನಾಡಿನ 12 ವರ್ಷದ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆ ಕುಸಿದು  ಬಿದ್ದು ಸಾವನ್ಪನ್ನಪ್ಪಿದ ಘಟನೆ ನಡೆದಿದೆ.

ತಮಿಳುನಾಡು ಮೂಲದ ಪದ್ಮಶ್ರೀ (12) ಮೃತ ಬಾಲಕಿಯಾಗಿದ್ದಾಳೆ. ದೇವಸ್ಥಾನದ ಅಪ್ಪಾಚಿಮೇಡು ಪ್ರದೇಶದಲ್ಲಿ ಬಾಲಕಿ ಕುಸಿದು ಬಿದ್ದಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೂ ಆಕೆಯನ್ನು ಉಳಿಸಲಾಗಲಿಲ್ಲ. ಮೃತದೇಹವನ್ನು ಪಂಬಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಬಾಲಕಿಗೆ ಈ ಹಿಂದೆಯೇ ಉಸಿರಾಟ ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳಿತ್ತು. ಬಾಲಕಿ ಮೂರು ವರ್ಷದಿಂದ ಹೃದ್ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಳು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಳು. ಇಷ್ಟೊಂದು ಅನಾರೋಗ್ಯ ಸಮಸ್ಯೆಗಳಿದ್ದರೂ, ಬಾಲಕಿಯನ್ನು ದೇವರ ದರ್ಶನಕ್ಕೆ ಕಳುಹಿಸಲಾಗಿತ್ತು. ಪೋಷಕರ ಭಕ್ತಿ ಬಾಲಕಿಯ ಪ್ರಾಣಕ್ಕೆ ಸಂಚಕಾರವಾಗಿದೆ.

ಈ ಬಾರಿ ಮಹಿಳಾ ಭಕ್ತರಿಗೂ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಶಬರಿಮಲೆಗೆ ಭಕ್ತರ ಸಂಖ್ಯೆ ಕೂಡ ಹೆಚ್ಚಳವಾಗಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅನೇಕ ಯಾತ್ರಾರ್ಥಿಗಳು ಬೇಲಿಗಳನ್ನು ಮುರಿದು ಅರಣ್ಯ ಮಾರ್ಗಗಳ ಮೂಲಕ ದೇವಾಲಯವನ್ನು ಪ್ರವೇಶಿಸಲು ಮುಂದಾಗಿದ್ದಾರೆ. ಸರ್ಕಾರ ನಿರ್ಮಿಸಿದ್ದ ಸರತಿ ಸಾಲಿನ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ.

ಇತ್ತೀಚಿನ ಸುದ್ದಿ

Exit mobile version