10:45 AM Saturday 23 - August 2025

ನನ್ನ ಸ್ನೇಹಿತರ ಲೈಂಗಿಕ ಬಯಕೆ ತೀರಿಸು ಎಂದು ಪ್ರಿಯಕರನಿಂದಲೇ ಬ್ಲ್ಯಾಕ್ ಮೇಲ್ | 40 ಅಡಿ ಎತ್ತರದಿಂದ ನದಿಗೆ ಹಾರಿದ ಯುವತಿ!

bareilly
03/08/2021

ಬರೇಲಿ:  ತನ್ನ ಸ್ನೇಹಿತರ ಲೈಂಗಿಕ ಬಯಕೆ ಈಡೇರಿಸು ಇಲ್ಲವಾದರೆ, 50 ಸಾವಿರ ರೂಪಾಯಿ ನೀಡು ಎಂದು ಪ್ರಿಯಕರ ಪ್ರೇಯಸಿಗೆ ಬ್ಲ್ಯಾಕ್ ಮೇಲ್ ಮಾಡಿದ್ದು, ಇದರಿಂದ ಹೆದರಿದ ಆಕೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಸ್ಥಳೀಯರು ರಕ್ಷಿಸಿದರೂ, ಆಕೆ ಪಾರ್ಶ್ವವಾಯುವಿಗೆ ತುತ್ತಾಗಿರುವ ಘಟನೆ ನಡೆದಿದೆ.

ಉತ್ತರಪ್ರದೇಶದ ಮೊರಾದಾಬಾದ್ ಯುವತಿಯನ್ನು ಆಕೆಯ ಪ್ರಿಯಕರ ಶಾದಾಬ್  ಹಾಗೂ ಆತನ ಸ್ನೇಹಿತರೇ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಯುವತಿಯು ಶಾದಾಬ್ ನನ್ನು ಪ್ರೀತಿಸುತ್ತಿದ್ದಳು. ಆಗಾಗ ಆತನನ್ನು ಭೇಟಿಯಾಗಿದ್ದ ಆಕೆ ಆತನ ಜೊತೆಗೆ ಸಂಬಂಧ ಬೆಳೆಸಿದ್ದಳು. ಈ ವೇಳೆ ಶಾದಾಬ್ ಆಕೆಯ ನಗ್ನ ಫೋಟೋ ಹಾಗೂ ವಿಡಿಯೋ ತೆಗೆದುಕೊಂಡಿದ್ದ. ಬಳಿಕ ಅದನ್ನು ತನ್ನ ಸ್ನೇಹಿತರಿಗೆ ಕಳುಹಿಸಿದ್ದ.

ಇದಾದ ಬಳಿಕ, ಶಾದಬ್, ತನ್ನ ಸ್ನೇಹಿತರ ಲೈಂಗಿಕ ಬಯಕೆ ಈಡೇರಿಸಬೇಕು ಎಂದು  ಯುವತಿಗೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ದಿನ ಕಳೆದಂತೆಯೇ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸು ಎಂದು ಶಾದಾಬ್ ಬಲವಂತ ಮಾಡಲು ಆರಂಭಿಸಿದ್ದು, ಅವರ ಆಸೆ ಈಡೇರಿಸದಿದ್ದರೆ, ನನಗೆ 50 ಸಾವಿರ ಹಣವನ್ನು ನೀಡಬೇಕು. ಇಲ್ಲವಾದರೆ, ನಿನ್ನ ವಿಡಿಯೋ ಹಾಗೂ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.

ಶಾದಾಬ್ ನ ಬ್ಲ್ಯಾಕ್ ಮೇಲ್ ನಿಂದ ತೀವ್ರವಾಗಿ ಭಯಗೊಂಡ ಸಂತ್ರಸ್ತೆ, ತೀವ್ರವಾಗಿ ನೊಂದು ಮಂಗಳವಾರ ಇಲ್ಲಿನ ನದಿಯೊಂದರ ಮೇಲ್ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಆಕೆ ಸೇತುವೆಯಿಂದ ಹಾರುವುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.

ಯುವತಿಯು ಸುಮಾರು 40 ಅಡಿ ಎತ್ತರದಿಂದ ನದಿಗೆ ಹಾರಿದ್ದರಿಂದಾಗಿ ಆಕೆಯ ಬೆನ್ನುಹುರಿಗೆ ಹಾನಿಯಾಗಿದೆ.  ಇದರಿಂದಾಗಿ ಸೊಂಟದಿಂದ ಕೆಳಗಿನ ಭಾಗ ಸಂಪೂರ್ಣವಾಗಿ ಆಕೆಯ ಸ್ವಾಧೀನ ಕಳೆದುಕೊಂಡಿದ್ದು ಪಾರ್ಶ್ವವಾಯುವಿಗೆ ತುತ್ತಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಯುವತಿಯ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಶಾದಾಬ್ ಮತ್ತು ಆತನ ಸ್ನೇಹಿತರಾದ ಆರೀಫ್, ಸದ್ದಾಂ ಮತ್ತು ರಶೀದ್ ಎಂಬ ನಾಲ್ವರರ ವಿರುದ್ಧ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ಪ್ರೀತಿಸಿಲು ನಿರಾಕರಿಸಿದ ಬಾಲಕಿಯನ್ನು ದಾರಿ ಮಧ್ಯೆ ತಡೆದು ಯುವಕನಿಂದ ಘೋರ ಕೃತ್ಯ!

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ | ಯುವಕ ಅರೆಸ್ಟ್

200 ರೂಪಾಯಿ ಪೆಟ್ರೋಲ್ ಹಾಕಿಸಿ ಹಣ ನೀಡದೇ ಪರಾರಿಯಾದ ಬೈಕ್ ಸವಾರರು!

ಲಾಡ್ಜ್ ನಲ್ಲಿ ಬಾಲಕನ ಅತ್ಯಾಚಾರ | ಮದ್ರಸ ಶಿಕ್ಷಕನಿಗೆ 11 ವರ್ಷ ಜೈಲು

 

ಇತ್ತೀಚಿನ ಸುದ್ದಿ

Exit mobile version