ಅಡ್ರೆಸ್ ಸರಿಯಾಗಿ ಹೇಳಿ: ಗ್ರಾಹಕನಿಗೆ ಫೂಡ್ ಡೆಲಿವರಿ ಬದಲು, ಪಂಚ್ ಡೆಲಿವರಿ ಮಾಡಿದ ಡೆಲಿವರಿ ಬಾಯ್!

delivery boy
24/05/2025

ಬೆಂಗಳೂರು: ಡೆಲಿವರಿ ಬಾಯ್ ಗಳು ಊಟ ಡೆಲಿವರಿ ಮಾಡುವುದು ಸಾಮಾನ್ಯ, ಇಲ್ಲೊಬ್ಬ ಡೆಲಿವರಿ ಬಾಯ್, ಅಡ್ರೆಸ್ ತಪ್ಪಾಗಿ ನೀಡಿದ ಗ್ರಾಹಕನ ಮುಖಕ್ಕೆ ಪಂಚ್ ಡೆಲಿವರಿ ಮಾಡಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ.

ವಿಷ್ಣುವರ್ಧನ್ ಎಂಬ ಡೆಲಿವರಿ ಬಾಯ್ ಹಲ್ಲೆ ನಡೆಸಿದ ವ್ಯಕ್ತಿಯಾಗಿದ್ದು, ಶಶಾಂಕ್ ಎಂಬ ಗ್ರಾಹಕ ಹಲ್ಲೆಗೊಳಗಾದವರಾಗಿದ್ದಾರೆ. ಮೇ 21ರಂದು ಈ ಘಟನೆ ನಡೆದಿದೆ.

ಶಶಾಂಕ್ ಪತ್ನಿ ಫೂಡ್ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ಬಂದಾಗ ಶಶಾಂಕ್ ನಾದಿನಿ ಸಾಮಗ್ರಿ ತೆಗೆದುಕೊಳ್ಳಲು ಹೋಗಿದ್ದರು. ಈ ವೇಳೆ ಅಡ್ರೆಸ್ ವಿಚಾರಕ್ಕೆ  ಡೆಲಿವರಿ ಬಾಯ್ ಬಾಯಿಗೆ ಬಂದ ಹಾಗೆ ಬೈದಿದ್ದಾನೆ ಎನ್ನಲಾಗಿದೆ. ಈ ವೇಳೆ  ಗಲಾಟೆ ಕೇಳಿಸಿ ಬಂದ ಶಶಾಂಕ್ ಡೆಲಿವರಿ ಬಾಯ್ ಜೊತೆಗೆ ವಾಗ್ವಾದ  ಆರಂಭಿಸಿದ್ದು,  ಈ ವೇಳೆ ಡೆಲಿವರಿ ಬಾಯ್ ಶಶಾಂಕ್ ಮೇಲೆ ಹಲ್ಲೆ ನಡೆಸಿದ್ದಾನೆ.

ಡೆಲಿವರಿ ಬಾಯ್ ನ ಹೊಡೆತನ್ನ ಕಣ್ಣಿನ ಕೆಳಗಿನ ಮೂಳೆ ಕಟ್ ಆಗಿದೆ. ಇನ್ನೊಮ್ಮೆ ಪರಿಶೀಲಿಸಿದ ಬಳಿಕ ಆಪರೇಷನ್ ಅಗತ್ಯವೇ ಎಂದು ತಿಳಿಸುವುದಾಗಿ ವೈದ್ಯರು ಹೇಳಿದ್ದಾರೆ ಎಂದು ಶಶಾಂಕ್ ತಿಳಿಸಿದ್ದಾರೆ.

ಈ ಘಟನೆ ಕುರಿತು ಶಶಾಂಕ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ ಐಆರ್ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version