1:41 AM Tuesday 16 - December 2025

ಚಿನ್ನ–ಬೆಳ್ಳಿ ಬೆಲೆ ಮತ್ತೊಂದು ದಾಖಲೆ: 10 ಗ್ರಾಂ ಚಿನ್ನಕ್ಕೆ ₹1.34 ಲಕ್ಷ!

gold price
16/12/2025

ಬೆಂಗಳೂರು, ಡಿಸೆಂಬರ್ 16, 2025:  ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ದರವು ಮತ್ತೊಂದು ಭಾರಿ ಜಿಗಿತ ಕಂಡಿದ್ದು, ಆಭರಣ ಪ್ರಿಯರಿಗೆ ಆಘಾತ ನೀಡಿದೆ. ವಾರದ ಆರಂಭಿಕ ದಿನವಾದ ಸೋಮವಾರ, ಡಿಸೆಂಬರ್ 15 ರಂದೇ ಚಿನ್ನದ ಬೆಲೆಯು ಭರ್ಜರಿ 820 ರೂಪಾಯಿ ಏರಿಕೆ ಕಂಡಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಇಂದಿನ (ಡಿಸೆಂಬರ್ 16) ದರಗಳು:

24 ಕ್ಯಾರೆಟ್ ಶುದ್ಧ ಚಿನ್ನ —  ₹13,473 (1 ಗ್ರಾಂಗೆ ಬೆಲೆ) — 10 ಗ್ರಾಂಗೆ ಬೆಲೆ  ₹1,34,730 (ದಾಖಲೆ)

22 ಕ್ಯಾರೆಟ್ (ಆಭರಣ) ಚಿನ್ನ– ₹12,350 (1 ಗ್ರಾಂಗೆ ಬೆಲೆ)–  10 ಗ್ರಾಂಗೆ ಬೆಲೆ  ₹1,23,500

ಬೆಳ್ಳಿ ದರವೂ ಸಹ ಹೆಚ್ಚಳವಾಗಿದ್ದು, ಪ್ರತಿ ಕೆ.ಜಿ.ಗೆ ₹2,00,900 ಕ್ಕೆ ಏರಿಕೆಯಾಗಿದೆ.

ಏರಿಕೆಗೆ ಪ್ರಮುಖ ಕಾರಣಗಳು:

ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಸೂಚನೆಗಳು, ಅಮೆರಿಕಾದ ಡಾಲರ್ ಮೌಲ್ಯದ ಕುಸಿತ ಮತ್ತು ಯುಎಸ್ ಫೆಡರಲ್ ರಿಸರ್ವ್‌ನಿಂದ ಇತ್ತೀಚೆಗೆ ಮಾಡಲಾದ ಬಡ್ಡಿ ದರ ಕಡಿತದಂತಹ ಅಂಶಗಳು ಹೂಡಿಕೆದಾರರನ್ನು ಬಂಗಾರದತ್ತ ಸೆಳೆಯುತ್ತಿವೆ. ಹೆಚ್ಚಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಆರ್ಥಿಕ ಅನಿಶ್ಚಿತತೆಗಳೂ ಸಹ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿವೆ.

ಒಂದು ವರ್ಷದಲ್ಲಿ ಭಾರೀ ಹೆಚ್ಚಳ:

ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಯು ಶೇಕಡಾ 73 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಚಿನ್ನದ ಬೆಲೆ ಏರಿಕೆಯ ಹಾದಿಯಲ್ಲೇ ಮುಂದುವರಿಯುವ ಸಾಧ್ಯತೆ ಇದ್ದು, ಹೂಡಿಕೆದಾರರು ಬೆಲೆ ಇಳಿಕೆಯಾದಾಗ ಖರೀದಿಸಲು ಸಲಹೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version