4:02 PM Thursday 4 - September 2025

ಅಗ್ನಿವೀರರಿಗೆ ಸಿಹಿ ಸುದ್ದಿ: ಸಿಐಎಸ್ಎಫ್ ನಲ್ಲಿ ಶೇ.10ರಷ್ಟು ಮೀಸಲಾತಿ ಘೋಷಿಸಿದ ಮೋದಿ ಸರ್ಕಾರ

11/07/2024

ಅಗ್ನಿವೀರ್ ಕುರಿತು ಡೆಯುತ್ತಿರುವ ವಿವಾದದ ಮಧ್ಯೆ, ಕೇಂದ್ರ ಸರ್ಕಾರವು ಅಗ್ನಿವೀರರಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನಿವೃತ್ತ ಅಗ್ನಿವೀರ್ ಗಳಿಗೆ ಕೇಂದ್ರ ಪೊಲೀಸ್ ಪಡೆಗಳಲ್ಲಿ ಉದ್ಯೋಗ ನೀಡಲಾಗುವುದು. ಅಲ್ಲದೇ ಶೇಕಡಾ 10 ರಷ್ಟು ಹುದ್ದೆಗಳನ್ನು ಅವರಿಗೆ ಮೀಸಲಿಡಲಾಗಿದೆ. ಹೆಚ್ಚುವರಿಯಾಗಿ ಮಾಜಿ ಅಗ್ನಿವೀರರಿಗೆ ದೈಹಿಕ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು. ಸಿಐಎಸ್ಎಫ್ ನಲ್ಲಿ ಶೇಕಡಾ 10 ರಷ್ಟು ಸ್ಥಾನಗಳನ್ನು ಅವರಿಗೆ ಮೀಸಲಿಡಲಾಗುವುದು. ಸಿಐಎಸ್ಎಫ್ ಮಹಾನಿರ್ದೇಶಕ ನೀನಾ ಸಿಂಗ್ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.

ಅಗ್ನಿಪಥ್ ಯೋಜನೆಯಿಂದ ಪ್ರಯೋಜನ ಪಡೆಯುತ್ತಿರುವ ಮಾಜಿ ಅಗ್ನಿವೀರರು ಸಹ ವಯಸ್ಸಿನ ಮಿತಿ ಸಡಿಲಿಕೆಗಳನ್ನು ಪಡೆಯುತ್ತಾರೆ ಎಂದು ಡಿಜಿ ನೀನಾ ಸಿಂಗ್ ಹೇಳಿದ್ದಾರೆ. ಇದು ಸಿಐಎಸ್ಎಫ್ ಗೆ ಪ್ರಯೋಜನಕಾರಿಯಾಗಿದೆ.

ಯಾಕೆಂದರೆ ಇದು ತರಬೇತಿ ಪಡೆದ, ಸಮರ್ಥ ಮತ್ತು ನುರಿತ ಯುವ ವ್ಯಕ್ತಿಗಳನ್ನು ಪಡೆಯುತ್ತದೆ. ಆ ಪಡೆಯೊಳಗೆ ಶಿಸ್ತನ್ನು ಕಾಪಾಡಿಕೊಳ್ಳುತ್ತದೆ. ಅಗ್ನಿವೀರ್ ಅವರಿಗೆ ಸಿಐಎಸ್ಎಫ್‌ನಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಮಾಜಿ ಅಗ್ನಿವೀರ್ ಗಳ ಮೊದಲ ಬ್ಯಾಚ್ ಗೆ, ಗರಿಷ್ಠ ವಯಸ್ಸಿನ ಮಿತಿಯನ್ನು ಐದು ವರ್ಷಗಳವರೆಗೆ ಸಡಿಲಿಸಲಾಗುವುದು ಮತ್ತು ನಂತರದ ಬ್ಯಾಚ್ ಗಳಿಗೆ ಮೂರು ವರ್ಷಗಳವರೆಗೆ ಸಡಿಲಿಕೆ ಇರುತ್ತದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version