11:16 AM Wednesday 22 - October 2025

ಇಂಟರ್ ನೆಟ್ ಬಳಕೆದಾರರಿಗೆ ಸಿಹಿಸುದ್ದಿ | ಇನ್ನು ಇಂಟರ್ ನೆಟ್ ಗಾಗಿ ದುಬಾರಿ ರೀಚಾರ್ಜ್ ಮಾಡಬೇಕಿಲ್ಲ

27/10/2020

ನವದೆಹಲಿ: 160 ರೂಪಾಯಿ ರೀಚಾರ್ಜ್ ಮಾಡಿದರೆ ಸಿಗೋದು ಜುಜುಬಿ 16 ಜಿಬಿ ಡೇಟಾ, ಅದೂ ನೆಟ್ಟಗೆ ಕೆಲಸ ಮಾಡಿದರೆ ಪರವಾಗಿಲ್ಲ, ಹಣಕೊಟ್ಟು ಕೈ ಆರುವ ಮುನ್ನವೇ ನಿಮ್ಮ ಡೇಟಾ ಮುಗಿದಿದೆ ಎಂದು ಮೆಸೆಜ್ ಬಂದಿರುತ್ತದೆ. ಹೀಗೆ ಡೇಟಾ ಸಂಕಷ್ಟಕ್ಕೆ ಸಿಲುಕಿದವರಿಗೆ ಇದೀಗ ಸಂತಸದ ಸುದ್ದಿಯೊಂದು ದೊರಕಿದೆ.


ದೇಶದಲ್ಲಿ ಸದ್ಯ ಡೇಟಾ ಸೇವೆಗಳಿಗೆ ಮೊಬೈಲ್ ಸೇವಾ ಕಂಪೆನಿಗಳು ದುಪ್ಪಟ್ಟು ದರಗಳನ್ನು ನಿಗದಿ ಪಡಿಸುತ್ತಿವೆ.  ದೇಶದಲ್ಲಿ ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿ ಮಾಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ದೂರಸಂಪರ್ಕ ಕಂಪನಿಗಳು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವನ್ನು(ಟ್ರಾಯ್) ಒತ್ತಾಯಿಸಿವೆ ಎಂದು ವರದಿಯಾಗಿದೆ.


ಮಾಹಿತಿಗಳ ಪ್ರಕಾರ, ಈ ಒತ್ತಾಯದ ಬೆನ್ನಲ್ಲೇ ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿಯಾಗಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಇಂಟರ್ ನೆಟ್ ಬಳಕೆದಾರರು ಸ್ವಲ್ಪ ಮಟ್ಟಿಗೆ ಉಸಿರಾಡಬಹುದು ಎಂದು ಹೇಳಲಾಗಿದೆ. ಟ್ರಾಯ್ ನ ಹೊಸ ಅಧ್ಯಕ್ಷ ಪಿ.ಡಿ.ವಘೇಲಾ ಜೊತೆ ನಡೆಸಿದಂತ ಸಭೆಯಲ್ಲಿ ದೂರ ಸಂಪರ್ಕ ಕಂಪನಿಗಳು ಈ ಒತ್ತಾಯವನ್ನಿಟ್ಟಿದೆ ಎಂದು ತಿಳಿದು ಬಂದಿದೆ.


ಇತ್ತೀಚಿನ ಸುದ್ದಿ

Exit mobile version