9:59 PM Thursday 15 - January 2026

ಗುರಿ ತಪ್ಪಿದ ಗುಂಡು: 8 ವರ್ಷದ ಬಾಲಕಿ ಬಲಿ

gundu
24/01/2022

ಚಿಕಾಗೋ: ನಗರದ ನೈರುತ್ಯ ಭಾಗದಲ್ಲಿ ಬೇರೊಬ್ಬರನ್ನು ಗುರಿಯಾಗಿಸಿಕೊಂಡು ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ, ಗುರಿ ತಪ್ಪಿ ಗುಂಡು 8 ವರ್ಷದ ಬಾಲಕಿಯ ತಲೆಗೆ ತಗುಲಿದ್ದು, ಆಕೆ ಮೃತಪಟ್ಟಿದ್ದಾಳೆ.

ಚಿಕಾಗೋದ ಮೆಲಿಸ್ಸಾ ಒರ್ಟೆಗಾ ಮೃತ ಬಾಲಕಿ. ಬಾಲಕಿ ಶನಿವಾರ ಮಧ್ಯಾಹ್ನ ತನ್ನ ತಾಯಿಯೊಂದಿಗೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ, ಹತ್ತಿರದ ಅಂಗಡಿಯಿಂದ ಹೊರ ಹೋಗುತ್ತಿದ್ದ 26 ವರ್ಷ ವಯಸ್ಸಿನ ವ್ಯಕ್ತಿಯ ಮೇಲೆ ಯಾರೋ ಗುಂಡು ಹಾರಿಸಿದರು ಎಂದು ವರದಿಯಾಗಿದೆ.

ಗುಂಡಿನ ದಾಳಿಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ದುಷ್ಕರ್ಮಿಗಳನ್ನು ಬಂಧಿಸುವವರೆಗೆ ಇಲಾಖೆ ವಿಶ್ರಮಿಸುವುದಿಲ್ಲ ಎಂದು ಪೊಲೀಸ್ ಅಧೀಕ್ಷಕ ಡೇವಿಡ್ ಬ್ರೌನ್ ಹೇಳಿದರು. ಚಿಕಾಗೋದಲ್ಲಿ ಮಾನವ ಹತ್ಯಾ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಈ ಗುಂಡಿನ ದಾಳಿ ನಡೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಲವಂತದಿಂದ ಮದುವೆಯಾಗಲು ನಾದಿನಿಯನ್ನೇ ಕಿಡ್ನಾಪ್ ಮಾಡಿದ ಬಾವ

ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಬಾಲಕ

ಸೊಸೆಯಿಂದಲೇ ಅತ್ತೆಯ ಕೊಲೆ

ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದೇ ಬಿಜೆಪಿ ಸರ್ಕಾರದ ಸಾಧನೆ: ಈಶ್ವರ ಖಂಡ್ರೆ

ನಾಪತ್ತೆಯಾಗಿದ್ದ ಬಸ್ ಮಾಲಕ ಶವವಾಗಿ ಪತ್ತೆ

 

ಇತ್ತೀಚಿನ ಸುದ್ದಿ

Exit mobile version