ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಅರ್ಧ ಬೆಂದ ಚಪಾತಿ, ಅನ್ನ: ಪ್ರಶ್ನಿಸಿದ್ರೆ “ತಿನ್ನೋಕ್ ಬಂದಿದ್ದೀರಾ?” ಅಂತ ಕೇಳ್ತಾರಂತೆ!
ಚಿಕ್ಕಮಗಳೂರು: ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರಿಗೆ ನೀಡುತ್ತಿರುವ ಚಪಾತಿ, ಅನ್ನ ವಿದ್ಯಾರ್ಥಿನಿಯರ ಹೊಟ್ಟೆಗೆ ಸೇರದೇ, ಕಸದ ತೊಟ್ಟಿಗೆ ಸೇರುತ್ತಿದೆ. ವಿದ್ಯಾವಂತ ವಿದ್ಯಾರ್ಥಿನಿಯರು ಅನ್ನ ಯಾಕೆ ವೇಸ್ಟ್ ಮಾಡ್ತಾ ಇದ್ದಾರೆ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.
ಚಿಕ್ಕಮಗಳೂರು ನಗರದ ಎ.ಐ.ಟಿ.ವೃತ್ತದಲ್ಲಿರೋ ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಅರ್ಧ ಬೆಂದ ಚಪಾತಿ, ಅರ್ಧ ಬೆಂದ ಅನ್ನ ತಿಂದು ಬದುಕುವ ದುಸ್ಥಿತಿ ಇಲ್ಲಿನ ವಿದ್ಯಾರ್ಥಿನಿಯರದ್ದಾಗಿದೆ. ಹೀಗಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ವಿದ್ಯಾರ್ಥಿನಿಯರು ತಮ್ಮ ಹೆಸರು, ಮೊಬೈಲ್ ನಂಬರ್ ಸಹಿತವಾಗಿ ದೂರು ನೀಡಿದ್ದಾರೆ.


ಹಾಸ್ಟೆಲ್ ನಲ್ಲಿ ನೆಮ್ಮದಿಯಾಗಿ ಊಟ ಮಾಡಲು ಸಾಧ್ಯವಾಗದೇ ವಿದ್ಯಾರ್ಥಿನಿಯರು ಪರದಾಡುತ್ತಿದ್ದಾರೆ. ಶುಚಿ–ರುಚಿ ಊಟ ನೀಡುತ್ತಿಲ್ಲ, ಅರ್ಧಂಬರ್ಧ ಬೆಂದ ಊಟ ಕೊಡ್ತಿದ್ದಾರೆ ಎನ್ನುವುದು ವಿದ್ಯಾರ್ಥಿನಿಯರ ಆರೋಪವಾಗಿದೆ. ಊಟ ಸರಿಯಾಗಿಲ್ಲ ಎಂದರೆ, “ನೀವು ತಿನ್ನೋದಕ್ಕೆ ಬಂದಿದ್ದೀರಾ? ಇಲ್ಲ ಓದೋದಿಕ್ಕೆ ಬಂದಿದ್ದೀರಾ” ಎಂದು ಪ್ರಶ್ನಿಸಿ ವಿದ್ಯಾರ್ಥಿನಿಯರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸವನ್ನ ಮಾಡಲಾಗುತ್ತಿದೆಯಂತೆ.
ಫೇಕ್ ಫೀಡ್ ಬ್ಯಾಕ್ ಬುಕ್ ಇಟ್ಟು ಹೆದರಿಸಿ ಬರೆಸಿಕೊಳ್ಳುತ್ತಿದ್ದಾರೆ, ರಾತ್ರಿ ಹೊತ್ತು ವಾರ ಪೂರ್ತಿ ಒಂದೇ ಸಾರು ಮಾಡುತ್ತಾರೆ, ಮುದ್ದೆ ಖಾಲಿ ಅಂತಾರೆ, ಊಟ–ತಿಂಡಿ, ಮೂಲ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ರು ಯಾವುದೇ ಕ್ರಮಕೈಗೊಳ್ತಾ ಇಲ್ಲ ಎನ್ನುವುದು ವಿದ್ಯಾರ್ಥಿನಿಯರ ಅಳಲು.
ವಾರ್ಡನ್ ದಬ್ಬಾಳಿಕೆಯಿಂದ ಮುಕ್ತಿ ನೀಡಿ, ಒಳ್ಳೆಯ ಊಟ—ತಿಂಡಿ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಾದ್ರೂ ಸರಿಯಾದ ಕ್ರಮಕೈಗೊಳ್ಳುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























