11:48 AM Wednesday 15 - October 2025

ಹಾಲು ಕುಡಿಯುವ ಮಗುವಿಗೆ ಆಲ್ಕೋಹಾಲ್ ಕುಡಿಸಿದ ಪಾಪಿ | ಮುಂದೆ ನಡೆದ್ದದ್ದೇನು ಗೊತ್ತಾ?

alcohol ban
31/05/2021

ಭೋಪಾಲ್:  ಹಾಲು ಕುಡಿಯುವ 2 ವರ್ಷ ವಯಸ್ಸಿನ ಮಗುವಿಗೆ  ಯುವಕನೋರ್ವ ಮದ್ಯ ಕುಡಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಭೂಪಾಲ್ ನ ಅಶೋಕ್ ಗಾರ್ಡನ್ ನಗರದಲ್ಲಿ ನಡೆದಿದೆ.

ಅಶೋಕ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯ ರೂಪನಗರ ನಿವಾಸಿ 22 ವರ್ಷ ವಯಸ್ಸಿನ ಸಂದೀಪ್ ಭಾಟಿಯಾ ಅಲಿಯಾಸ್ ಛೋಟು ಲಂಗಾ  ಶುಕ್ರವಾರ ರಾತ್ರಿ ಈ ಕೃತ್ಯ ನಡೆಸಿದ್ದು, ಮಗುವಿಗೆ ತಿಂಡಿ ತಿನಿಸುವ ನೆಪದಲ್ಲಿ ಮಗುವನ್ನು ಹೊರಗೆ ಕೊಂಡೊಯ್ದಿದ್ದು, ಬಳಿಕ ಮದ್ಯ ಕುಡಿಸಿದ್ದಾನೆ. ಇದರ ಬೆನ್ನಲ್ಲೇ  ಮಗುವಿನ ಆರೋಗ್ಯ ಕ್ಷೀಣಿಸಿದೆ. ಇದರಿಂದ ಹೆದರಿದ ಆತ ಮಗುವನ್ನು ತಾಯಿಯ ಬಳಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಈತ ಪರಾರಿಯಾದ ಬೆನ್ನಲ್ಲೇ ಮಗು ವಾಂತಿ ಮಾಡಿದ್ದು, ಈ ವೇಳೆ ಮಗುವಿಗೆ ಮದ್ಯ ಕುಡಿಸಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಮಗುವನ್ನು ಕಮಲಾ ನಗರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಜೆ.ಜೆ. ಕಾಯ್ದೆಯಡಿಯಲ್ಲಿ ಆರೋಪಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಇನ್ನೂ ಆರೋಪಿ ಛೋಟುವನ್ನು ಬಂಧಿಸಿದ ವೇಳೆಯಲ್ಲಿ ಕೂಡ ಆತ ಮದ್ಯಪಾನ ಮಾಡಿದ್ದನು ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ

Exit mobile version