ಹಮಾಸ್ ದಾಳಿ: ಇಸ್ರೇಲ್ ನಾಗರಿಕರಲ್ಲಿ ಭಯ; ಬಂದೂಕು ಲೈಸೆನ್ಸ್ ಗಾಗಿ ಮುಗಿಬಿದ್ದ ಇಸ್ರೇಲಿಗರು

ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಬಳಿಕ ಇಸ್ರೇಲ್ ನಾಗರಿಕರಲ್ಲಿ ತೀವ್ರ ಅಸುರಕ್ಷಿತ ಭಾವ ಉಂಟಾಗಿದೆ ಎಂಬ ವರದಿಗಳು ಪ್ರತಿದಿನ ವರದಿಯಾಗುತ್ತಿವೆ. ಇವರಲ್ಲಿ ಅತಿ ಹೆಚ್ಚು ಅಸುರಕ್ಷಿತತೆಯನ್ನು ಅನುಭವಿಸುತ್ತಿರುವುದು ಮಹಿಳೆಯರು ಎಂದು ಕೂಡ ಗೊತ್ತಾಗಿದೆ. ಹಮಾಸ್ ಆಕ್ರಮಣದ ಬಳಿಕ ಬಂದೂಕು ಲೈಸೆನ್ಸ್ ಗಾಗಿ ಇಸ್ರೇಲಿಯನ್ನರು ಮುಗಿ ಬೀಳುತ್ತಿದ್ದಾರೆ. ಈವರೆಗೆ 42,000 ಕ್ಕಿಂತಲೂ ಅಧಿಕ ಮಹಿಳೆಯರು ಬಂದೂಕು ಲೈಸ್ಸೆನ್ಸ್ ಅನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಂದೂಕು ಲೈಸೆನ್ಸ್ ಅಪೇಕ್ಷಿಸಿದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಈ 42000 ಅಪೇಕ್ಷಿತರ ಪೈಕಿ 18,000 ಮಂದಿಗೆ ಲೈಸೆನ್ಸ್ ನೀಡಲಾಗಿದೆ ಎಂದು ವರದಿಯಾಗಿದೆ. ಬಂದೂಕು ಲೈಸೆನ್ಸ್ ಗೆ ಸಂಬಂಧಿಸಿದಂತೆ ನೇತನ್ಯಾಹು ಸರಕಾರ ಕೆಲವು ರಿಯಾಯಿತಿಯನ್ನು ನೀಡಿತ್ತು. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮತ್ತು ಇಸ್ರೇಲಿನಲ್ಲಿ ಈಗಾಗಲೇ 15000 ಕ್ಕಿಂತಲೂ ಅಧಿಕ ಮಹಿಳೆಯರಿಗೆ ಬಂದೂಕು ಉಪಯೋಗಿಸಲು ಈಗಾಗಲೇ ಅವಕಾಶ ಲಭ್ಯವಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth