6:36 AM Monday 15 - September 2025

ಮುಂಬೈ ಇಂಡಿಯನ್ಸ್​ ಗೆ ಮರಳಿದ ಹಾರ್ದಿಕ್ ಪಾಂಡ್ಯ | ಐಪಿಎಲ್ 2024ಕ್ಕೆ ಪೂರ್ವಭಾವಿಯಾಗಿ ತಂಡಕ್ಕೆ ವಾಪಸ್​

mumbai indians
28/11/2023

ಮುಂಬೈ: ಸ್ಟಾರ್​ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಅವರು ಐಪಿಎಲ್​ 2024ಕ್ಕೆ ಪೂರ್ವಭಾವಿಯಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳ ಬಳಗವಾದ ‘ಎಂಐ ಪಲ್ಟಾನ್‌’ ಪಾಲಿಗೆ ಯಾವಾಗಲೂ ನೆಚ್ಚಿನ ಆಟಗಾರರಾಗಿರುವ ಹಾರ್ದಿಕ್​ ಪಾಂಡ್ಯ ಸೋಮವಾರ ತಂಡದೊಂದಿಗೆ ಮರಳಿ ಒಗ್ಗೂಡಿದ್ಧಾರೆ.

‘ಹಾರ್ದಿಕ್ ಅವರನ್ನು ಮನೆಗೆ ಮರಳಿ ಸ್ವಾಗತಿಸಲು ರೋಮಾಂಚನಗೊಂಡಿದ್ದೇವೆ. ಇದು ನಮ್ಮ ಮುಂಬೈ ಇಂಡಿಯನ್ಸ್ ಕುಟುಂಬದೊಂದಿಗೆ ಹೃದಯಸ್ಪರ್ಶಿ ಪುನರ್ಮಿಲನವಾಗಿದೆ. ಮುಂಬೈ ಇಂಡಿಯನ್ಸ್‌ನ ಯುವ ಪ್ರತಿಭಾನ್ವೇಷಣೆಯ ಆಟಗಾರ ಈಗ ಟೀಮ್ ಇಂಡಿಯಾದ ಸ್ಟಾರ್ ಆಗಿ ದೊಡ್ಡ ಬೆಳವಣಿಗೆಯನ್ನು ಕಂಡಿದ್ದಾರೆ. ಅವರ ಮತ್ತು ಮುಂಬೈ ಇಂಡಿಯನ್ಸ್‌ ಭವಿಷ್ಯ ಏನಾಗಲಿದೆ ಎಂದು ನಮ್ಮಲ್ಲಿ ಭಾರಿ ಕುತೂಹಲ ಮೂಡಿದೆ’ ಎಂದು ತಂಡದ ಒಡತಿ ನೀತಾ ಎಂ. ಅಂಬಾನಿ ಹೇಳಿದ್ದಾರೆ.

ಹಾರ್ದಿಕ್ ವಾಪಸಾತಿಯ ಕುರಿತು ಮಾತನಾಡಿದ ಶ್ರೀ ಆಕಾಶ್ ಅಂಬಾನಿ, ‘ಹಾರ್ದಿಕ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದಲ್ಲಿ ಮರಳಿ ನೋಡುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇದು ಸಂತೋಷದ ಗೃಹಪ್ರವೇಶ. ಅವರು ಆಡುವ ಯಾವುದೇ ತಂಡಕ್ಕೆ ಉತ್ತಮ ಸಮತೋಲನವನ್ನು ಒದಗಿಸುತ್ತಾರೆ. ಎಂಐ ಕುಟುಂಬದೊಂದಿಗೆ ಹಾರ್ದಿಕ್ ಅವರ ಮೊದಲ ಅವಧಿಯು ಅತ್ಯಂತ ಯಶಸ್ವಿಯಾಗಿತ್ತು ಮತ್ತು ಅವರು ತಮ್ಮ ಎರಡನೇ ಹಂತದಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ಎಂದು ನಾವು ನಂಬಿದ್ದೇನೆ’ ಎಂದಿದ್ದಾರೆ.

ಹಾರ್ದಿಕ್ ಪಾಂಡ್ಯ ವಾಪಸಾತಿಯಿಂದ ಮುಂಬೈ ಇಂಡಿಯನ್ಸ್​ ಕುಟುಂಬವನ್ನು (#OneFamily) ಮರಳಿ ಕೂಡಿಕೊಂಡಂತಾಗಿದೆ. ಅವರು ರೋಹಿತ್ ಶರ್ಮ, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ತಂಡದೊಂದಿಗೆ ಮರಳಿ ಸೇರಿಕೊಂಡಿದ್ದಾರೆ. ಅವರು ಮೊದಲು ಅವಕಾಶವನ್ನು ಅರಸುತ್ತ ಮುಂಬೈ ಇಂಡಿಯನ್ಸ್​ಗೆ ಬಂದರು ಮತ್ತು ನಂತರ 2016ರಲ್ಲಿ ಭಾರತಕ್ಕೆ ಪದಾರ್ಪಣೆಯನ್ನೂ ಮಾಡಿದರು.

ಭಾರತದ ಪ್ರಧಾನ ಆಲ್ರೌಂಡರ್ 2015ರಿಂದ 2021ರ ನಡುವಿನ ಐಪಿಎಲ್​ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಲ್ಕು ಪ್ರಶಸ್ತಿ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version