9:33 AM Thursday 15 - January 2026

ಬೆಂಗಳೂರಲ್ಲಿ ಹವಾಲಾ ದಂಧೆ ಬೆಳಕಿಗೆ: ನಾಲ್ಕು ಮಂದಿ ಆರೋಪಿಗಳ ಬಂಧನ

havala dandhe
23/12/2021

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಹವಾಲಾ ದಂಧೆ ಬೆಳಕಿಗೆ ಬಂದಿದ್ದು, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಸಾವಿರಾರು ಕೋಟಿ ಹವಾಲಾ ದಂಧೆ ನಡೆಸಿರುವುದು ಪತ್ತೆಯಾಗಿದೆ.

ಫೈಜಲ್, ಫಜಲ್, ಅಬ್ದುಲ್ ಮನಾಫ್, ಮಹಮ್ಮದ್ ಸಾಲಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ನಾಲ್ವರು ಆರೋಪಿಗಳು 3,000 ಕೋಟಿ ರೂ. ಹವಾಲಾ ವ್ಯವಹಾರ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳಿಂದ ಇದುವರೆಗೂ 2,886 ಅಕೌಂಟ್​ಗಳಿಗೆ 3000 ರೂ. ವರ್ಗಾವಣೆಯಾಗಿದೆ. ಉಳಿತಾಯ ಖಾತೆ, ಚಾಲ್ತಿ ಖಾತೆ ಅಲ್ಲದೇ ಜನ್ ​​​ಧನ್ ಖಾತೆಯಲ್ಲೂ ಹಣ ವರ್ಗಾವಣೆಯಾಗಿದೆ. ಆರೋಪಿಗಳು 25 ಬ್ಯಾಂಕ್​ಗಳ ಮೂಲಕ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಹವಾಲಾ ದಂಧೆಯ ಕಿಂಗ್ ಪಿನ್ ​ಗಳಾದ ರಿಯಾಜ್ ಹಾಗೂ ಮನಸ್ ಸಹೋದರರು,​ ಬೆಂಗಳೂರಿನಲ್ಲಿ ನಾಲ್ವರು ಬಂಧನಕ್ಕೊಳಗಾಗುತ್ತಿದ್ದಂತೆ ಸೌದಿಗೆ ಪರಾರಿಯಾಗಿದ್ದಾರೆ.
ಈ ಸಂಬಂಧ ಪುಟ್ಟೇನಹಳ್ಳಿ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಲೂಧಿಯಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸಂಕೀರ್ಣದಲ್ಲಿ ಸ್ಫೋಟ: ಇಬ್ಬರು ಸಾವು, ಐದು ಮಂದಿ ಗಾಯ

ಬಿಜೆಪಿ ಮುಖಂಡರಿಂದ ಅಯೋಧ್ಯೆ ಸುತ್ತಲಿನ ಭೂಮಿ ಲೂಟಿ: ಪ್ರಿಯಾಂಕಾ ಗಾಂಧಿ ಆರೋಪ

ಡಿ.31ಕ್ಕೆ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಕರೆ

ಸ್ವದೇಶಿ ನಿರ್ಮಿತ ‘ಪ್ರಳಯ್’ ಕ್ಷಿಪಣಿ ಮೊದಲ ಪರೀಕ್ಷೆ ಯಶಸ್ವಿ

ಪಾಕಿಸ್ತಾನ, ಅಫ್ಗಾನಿಸ್ತಾನದ 3,117 ಮಂದಿಗೆ ಭಾರತೀಯ ಪೌರತ್ವ: ಕೇಂದ್ರ ಸಚಿವ ನಿತ್ಯಾನಂದ ರಾಯ್‌

ಕರ್ನಾಟಕಕ್ಕೆ ತಾಕತ್ತಿದ್ದರೆ ಎಂ​ಇಎಸ್​ ಬ್ಯಾನ್​ ಮಾಡಲಿ: ಸಂಜಯ್​ ರಾವತ್​

ಇತ್ತೀಚಿನ ಸುದ್ದಿ

Exit mobile version