ವಾಶ್ ರೂಮ್ ಗೆ ಹೋಗಿದ್ದರಿಂದ ಜೀವ ಉಳಿಯಿತು: ಭಯಾನಕ ಅನುಭವ ಹಂಚಿಕೊಂಡ ಯುವತಿ

ಒಡಿಶಾ ಭೀಕರ ರೈಲು ಅಪಘಾತದಲ್ಲಿ ಬದುಕುಳಿದವರು ಇನ್ನೂ ಆಘಾತದಿಂದ ಹೊರ ಬಂದಿಲ್ಲ. ಅಪಘಾತದ ತೀವ್ರತೆ ಹೇಗಿತ್ತು ಮತ್ತು ತಾನು ಹೇಗೆ ಪಾರಾದೆ ಎನ್ನುವುದನ್ನು ವಂದನಾ ಎನ್ನುವ ಪ್ರಯಾಣಿಕರೊಬ್ಬರು ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ರೈಲು ಅಪಘಾತ ನಡೆಯುವ ಸಂದರ್ಭದಲ್ಲಿ ನಾನು ವಾಶ್ ರೂಂಗೆ ಹೋಗಿದ್ದೆ, ಆದ್ದರಿಂದ ನನ್ನ ಪ್ರಾಣ ಉಳಿಯಿತು ಎಂದು ಅವರು ಹೇಳಿದ್ದಾರೆ. ಜೋರಾದ ಶಬ್ಬ ಕೇಳಿಬಂತು. ವಾಶ್ ರೂಂ ನಿಂದ ಹೊರ ಬಂದು ನೋಡಿದರೆ ನನಗೆ ಶಾಕ್ ಕಾದಿತ್ತು. ಅಲ್ಲಿ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಹಲವರು ಗಾಯಗಳಿಂದ ನರಳುತ್ತಿದ್ದರು. ಒಬ್ಬರ ಮೇಲೆ ಒಬ್ಬರು ಬಿದ್ದಿದ್ದರು. ನನ್ನ ಸುತ್ತಮುತ್ತಾ ಬಿದ್ದಿದ್ದ ಹೆಣದ ರಾಶಿ ಕಂಡು ನಾನು ಶಾಕ್ ಆದೆ ಎಂದು ಅವರು ಹೇಳಿದರು.
ಶುಕ್ರವಾರ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 261 ಕ್ಕೆ ಏರಿಕೆಯಾಗಿದೆ, 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw