9:23 AM Wednesday 15 - October 2025

ಹಿಜಾಬ್ ವಿವಾದ: ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ; ಸಿ.ಎಂ.ಇಬ್ರಾಹಿಂ

cm ibrahim
15/03/2022

ಬೆಂಗಳೂರು: ಹಿಜಾಬ್ ವಿವಾದ ಕುರಿತಾಗಿ ಹೈಕೋರ್ಟ್ ತೀರ್ಪಿನ ಬಗ್ಗೆ ನಮಗೆ ಅಸಮಾಧಾನವಿದೆ. ಅದಕ್ಕೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತೀರ್ಪನ್ನು ಧರ್ಮದ ದೃಷ್ಟಿಯಿಂದ ನೋಡಬಾರದು. ಸಂವಿಧಾನದ ದೃಷ್ಟಿಯಿಂದ ನೋಡಬೇಕು. ತೀರ್ಪಿನಿಂದ ಬೀದಿಗಿಳಿಯಬೇಕಾದ ಅವಶ್ಯಕತೆಯಿಲ್ಲ. ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ. ಸುಪ್ರೀಂಗೆ ಹೋಗುವುದಕ್ಕೆ ಅವಕಾಶವಿದೆ ಎಂದರು.

ಇದು ಇಲ್ಲಿ ನಿಲ್ಲುವುದಿಲ್ಲ. ನಾಳೆ ಜೀನ್ಸ್ ಸೇರಿದಂತೆ ಬೇರೆ ಉಡುಪಿನ ಬಗ್ಗೆ ಚರ್ಚೆಯಾಗಬಹುದು. ಹಿಂದೂಗಳು ಸೆರಗನ್ನು ಮೈಮೇಲೆ ಹಾಕುತ್ತಾರೆ. ಮುಸ್ಲಿಂ ಹೆಣ್ಣುಮಕ್ಕಳು ತಲೆಮೇಲೆ ಹಾಕುತ್ತಾರೆ. ಹಾಗಾದರೆ ತಾಯಂದಿರು ಸೆರಗು ಹಾಕುವುದು ತಪ್ಪೇ ಎಂದು ಪ್ರಶ್ನಿಸಿದರು.

ನಾಳೆ ನೀವು ವಿಭೂತಿ ಹಾಕಬಾರದು ಎನ್ನುತ್ತೀರ. ನನಗೆ ಹಾಕಬೇಕೆಂದು ಇಷ್ಟವಿದೆ ನನ್ನನ್ನ ತಡೆಯಲು ನಿಮಗೆ ಹೇಗೆ ಸಾಧ್ಯ? ಇದರ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆ ಆಗಬೇಕಿದೆ. ಲಾಯರ್ ಮಜೀದ್ ಮೆಮನ್ ಜೊತೆಯೂ ನಾನು ಚರ್ಚೆ ಮಾಡಿದ್ದೇನೆ. ಒಗ್ಗಟ್ಟಾಗಿ ಸುಪ್ರೀಂಗೆ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಇಬ್ರಾಹಿಂ ಹೇಳಿದರು.

ಮಾಜಿ ಸಚಿವ ತನ್ವೀರ್ ಸೇಠ್ ಮಾತನಾಡಿ, ಹಿಜಾಬ್ ಬಗ್ಗೆ ನ್ಯಾಯಾಲಯ ತೀರ್ಪು ಕೊಟ್ಟಿದೆ. ಇದನ್ನು ಪ್ರಶ್ನಿಸಿ ನಾವು ಸುಪ್ರೀಂಗೆ ಹೋಗುತ್ತೇವೆ. ದೇಶವನ್ನ ಪ್ರಗತಿಪರವಾಗಿ ಕಟ್ಟಬೇಕು. ದೇಶದ ಐಕ್ಯತೆಗೆ ಇವತ್ತು ಧಕ್ಕೆ ಬಂದಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಾವು ಸುಪ್ರೀಂಕೋರ್ಟ್‌ ಗೆ ಹೋಗುತ್ತೇವೆ. ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುವ ಕೆಲಸವಾಗುತ್ತಿದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾಶ್ಮೀರದಲ್ಲಿ ಪಂಡಿತರಿಗಿಂತ ಮುಸ್ಲಿಂಮರೇ ಹೆಚ್ಚು ಹತ್ಯೆಯಾಗಿದ್ದಾರೆ!

ಹೈಕೋರ್ಟ್ ತೀರ್ಪು ಅತ್ಯಂತ ಐತಿಹಾಸಿಕವಾಗಿದೆ: ಪ್ರಮೋದ್​ ಮುತಾಲಿಕ್

ತಾಯಿ ಸಾವನ್ನಪ್ಪಿದ್ದು ಗೊತ್ತಿಲ್ಲದೇ 4 ದಿನ ಅಮ್ಮನ ಮಡಿಲಲ್ಲೇ ಮಲಗಿದ್ದ ಮಗ

ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿಮಿಷ ಪ್ರಿಯಗೆ ರಾಯಭಾರ ಕಚೇರಿಯ ಸಹಾಯದ ಭರವಸೆ

ಬರೀ ಟ್ವೀಟ್ ಮಾಡಿದರೆ ಪಕ್ಷ ಉಳಿಯಲ್ಲ: ಕಾಂಗ್ರೆಸ್ ಮುಖಂಡ ವೀರಪ್ಪ  ಮೊಯ್ಲಿ ಕಿಡಿ

 

ಇತ್ತೀಚಿನ ಸುದ್ದಿ

Exit mobile version