7:03 PM Thursday 15 - January 2026

ಪೆಟ್ರೋಲ್ ಬೆಲೆ ಏರಿಕೆಗೆ ವಿರುದ್ಧ  ಹಾಲಿನ ಬೆಲೆ 100ಕ್ಕೆ ಏರಿಸಿದ ರೈತರು | ಕೇಂದ್ರ ಸರ್ಕಾರಕ್ಕೆ ರೈತರ ತಿರುಗೇಟು

28/02/2021

ಚಂಡೀಗಢ: ಕೃಷಿ ಕಾನೂನು ಹಾಗೂ ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಹರ್ಯಾಣದ ರೈತರು ಕೇಂದ್ರ ಸರ್ಕಾರಕ್ಕೆ ತಕ್ಕ ತಿರುಗೇಟು ನೀಡಿದ್ದು, ಹಾಲಿಗೆ ಲೀಟರ್ ಗೆ 100 ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ.

 ಇಂದಿನಿಂದ ಸರ್ಕಾರಿ ಸಹಕಾರಿ ಸಂಘಗಳಿಗೆ ಒಂದು ಲೀಟರ್ ಹಾಲನ್ನು 100 ರೂಪಾಯಿಗೆ ಮಾರಾಟ ಮಾಡುವುದಾಗಿ ಖಾಪ್ ಪಂಚಾಯಿತಿ ನಾಯಕರು ಘೋಷಿಸಿದ್ದು, ಪೆಟ್ರೋಲ್ ಬೆಲೆ ಏರಿಕೆಗೆ ತಿರುಗೇಟು ನೀಡಲು ಮುಂದಾಗಿದ್ದಾರೆ.

 ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಉತ್ಪಾದನೆ ಕಡಿಮೆ ಮಾಡಿ ಹೆಚ್ಚಿನ ಲಾಭಗಳಿಸಲು ಉತ್ಪಾದಿತ ರಾಷ್ಟ್ರಗಳು ಮುಂದಾಗಿದ್ದು, ಕಡಿಮೆ ಇಂಧನ ಉತ್ಪಾದಿಸುತ್ತಿವೆ. ಇದರಿಂದಾಗಿ ಗ್ರಾಹಕ ದೇಶಗಳಲ್ಲಿ ಬೆಲೆ ಏರಿಕೆಯಾಗಿದೆ ಎಂದು ಕಾರಣ ನೀಡಿ ಇಂಧನ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಇದಕ್ಕೆ ರೈತರು ಕೂಟ ತಕ್ಕ ತಿರುಗೇಟು ನೀಡಿದ್ದಾರೆ.

ನಾವು ಹಾಲನ್ನು 100 ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದ್ದೇವೆ. ಡೈರಿಗೆ ರೈತರು 100 ರೂ. ದರದಲ್ಲಿ ಹಾಲು ಕೊಡುತ್ತಾರೆ. ಸರ್ಕಾರಿ ಸಹಕಾರ ಸಂಘಗಳಿಗೆ 100 ರೂಪಾಯಿಗೆ ಹಾಲು ಮಾರಾಟ ಮಾಡುವಂತೆ ರೈತರಿಗೆ ಮನವಿ ಮಾಡಿದ್ದೇವೆ ಎಂದು ಖಾಪ್ ಪಂಚಾಯತ್ ನಾಯಕರು ಘೋಷಿಸಿದ್ದಾರೆ.

ಎಲ್ಲ ಸರ್ಕಾರಿ ಸಹಕಾರ ಸಂಘಗಳಿಗೆ ಒಂದು ಲೀಟರ್ ಹಾಲಿಗೆ 100 ರೂ.ಗೆ ಮಾರಾಟ ಮಾಡುವಂತೆ ಹಾಲು ಉತ್ಪಾದಕರಿಗೆ ಮನವಿ ಮಾಡಿರುವುದಾಗಿ ಖಾಪ್ ಪಂಚಾಯಿತಿ ನಾಯಕರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version