7:00 AM Wednesday 15 - October 2025

ಹೃದಯ ವಿದ್ರಾವಕ ಘಟನೆ: ವಾಕಿಂಗ್ ಗೆ ಹೋಗಿದ್ದ ತಾಯಿ ಮಗ ಇಬ್ಬರೂ ಹೊಳೆಗೆ ಬಿದ್ದು ದಾರುಣ ಸಾವು

gangolli
11/09/2021

ಗಂಗೊಳ್ಳಿ: ವಾಕಿಂಗ್ ಗೆಂದು ತೆರಳಿದ್ದ ತಾಯಿ ಮಗ ಇಬ್ಬರು ಕೂಡ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ನಾಡ ಗ್ರಾಮದಲ್ಲಿ ಶನಿವಾರ ನಡೆದಿದೆ.

36 ವರ್ಷ ವಯಸ್ಸಿನ ರಿಯಾ ಪಿರೇರಾ ಹಾಗೂ ಅವರ ಪುತ್ರ 11 ವರ್ಷ ವಯಸ್ಸಿನ ಪುತ್ರ ಶಾನ್ ಮೃತಪಟ್ಟವರು ಎಂದು ತಿಳಿದು ಬಂದಿದೆ.  ಪೂರ್ವಾಹ್ನ 11:30ರ ಸುಮಾರಿಗೆ ತಾಯಿ ಮಗ ಇಬ್ಬರು ಕೂಡ ನಡೆದುಕೊಂಡು ನದಿ ತೀರದಲ್ಲಿ ಹೋಗಿದ್ದು, ಈ ವೇಳೆ ಶಾನ್ ಕಾಲು ಜಾರಿ ನದಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋದ ರಿಯಾ ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಘಟನಾ ಸ್ಥಳಕ್ಕೆ ಗಂಗೊಳ್ಳಿ ಠಾಣಾ ಅಧಿಕಾರಿಗಳು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ತೀವ್ರ ಹುಡುಕಾಟದ ಬಳಿಕ ಮೊದಲು ಪುತ್ರ ಶಾನ್ ನ ಮೃತದೇಹ ದೊರಕಿತ್ತು. ಕೆಲವು ಸಮಯಗಳ ಬಳಿಕ ರಿಯಾ ಅವರ ಮೃತದೇಹ ಕೂಡ ದೊರೆತಿದೆ. ಕುಟುಂಬದ ಇಬ್ಬರನ್ನು ಕಳೆದುಕೊಂಡು ಮೃತರ ಕುಟುಂಬಸ್ಥರು ತೀವ್ರ ದುಃಖಕ್ಕೀಡಾಗಿದ್ದಾರೆ.

ಇನ್ನಷ್ಟು ಸುದ್ದಿಗಳು…

ಆನ್ ಲೈನ್ ಗೆಳೆಯನ ಭೇಟಿಗೆ ತೆರಳಿದ ಯುವತಿಗೆ ಡ್ರಗ್ಸ್ ನೀಡಿ, ಐದು ಮಂದಿಯಿಂದ ಸಾಮೂಹಿಕ ಅತ್ಯಾಚಾರ!

ದೇವಸ್ಥಾನ ತೆರವು: ಹಿಂದೂ ಭಾವನೆಗಳ ವಿರುದ್ಧದ ಕೃತ್ಯ ಎಂದ ಸಿದ್ದರಾಮಯ್ಯ

ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ | ನಟ ಚೇತನ್

ವಿಧಾನಸಭೆಯ ಅಧಿವೇಶನದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಚರ್ಚಿಸಿ ಹಿಂಪಡೆಯದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ: ಕ್ಯಾಂಪಸ್ ಫ್ರಂಟ್

ಯಡಿಯೂರಪ್ಪ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಜರಾತ್ ಸಿಎಂ ವಿಜಯ್ ರೂಪಾನಿ!

ಇನ್ನು ನಾಲ್ಕು ವರ್ಷಗಳಲ್ಲಿ ಮನೆ ಮನೆಗಳಲ್ಲಿ ಆರೆಸ್ಸೆಸ್: ಮೋಹನ್ ಭಾಗವತ್

33 ತಾಸುಗಳ ಜೀವನ್ಮರಣ ಹೋರಾಟದ ಬಳಿಕ ಸಾವಿಗೀಡಾದ ಅತ್ಯಾಚಾರ ಸಂತ್ರಸ್ತೆ!

ಇಡೀ ತೋಟವನ್ನೇ ನಾಶ ಮಾಡಿದ ಆನೆ, ಪುಟ್ಟ ಹಕ್ಕಿ ಗೂಡು ಇದ್ದ ಬಾಳೆಗಿಡವನ್ನು ಬಿಟ್ಟು ಹೋಯಿತು!

ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿರುವ ಪ್ರಿಯಾಂಕ ಟಿಬ್ರೆವಾಲ್ ಹಿನ್ನೆಲೆ ಏನು ಗೊತ್ತೆ?

ಇತ್ತೀಚಿನ ಸುದ್ದಿ

Exit mobile version