ಗೃಹ ಮಂತ್ರಿಯಾ ಗ್ರಹಚಾರ ಮಂತ್ರಿಯಾ? ಬಿಜೆಪಿಯವರು ಸತ್ತಿದ್ರಾ?: ಮಹೇಶ್ ಶೆಟ್ಟಿ ತಿಮರೋಡಿ ತರಾಟೆ

ಬೆಳ್ತಂಗಡಿ: ಸಿದ್ದರಾಮಯ್ಯ 2 ಮರ್ಡರ್ ಮಾಡಿಸಿದ್ದಾರೆ ಎಂದು ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೇಳಿಕೆ ನೀಡಿದ್ದಾರೆ, ಅವರನ್ನು ಬಂಧಿಸಬೇಕು ಎಂದು ವಿಪಕ್ಷ ಬಿಜೆಪಿ ವಿಧಾನ ಸಭೆಯಲ್ಲಿ ಹೈಡ್ರಾಮ ನಡೆಸಿತ್ತು. ಬಿಜೆಪಿ ನಾಯಕರ ಹೇಳಿಕೆಗೆ ಸಚಿವ ಪರಮೇಶ್ವರ್ ಕೂಡ ತಲೆದೂಗಿ ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ಈ ಸಂಬಂಧ ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದು, ಗೃಹ ಸಚಿವರು ಹಾಗೂ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಹೇಶ್ ಶೆಟ್ಟಿ, ಅವರು ಗೃಹ ಮಂತ್ರಿಯಾ ಗ್ರಹಚಾರ ಮಂತ್ರಿಯಾ ಗೊತ್ತಿಲ್ಲ, ಹರೀಶ್ ಪೂಂಜಾ ಕೊಟ್ಟಿರುವ ಹೇಳಿಕೆ ಅದು. ಅವರಿಗೆ ಗೊತ್ತಿರಲೇ ಬೇಕು, ಒಂದು ರಾಜ್ಯದ ಗೃಹ ಮಂತ್ರಿ ಅವರು ಎಂದು ಗೃಹ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹರೀಶ್ ಪೂಂಜಾ ನೀಡಿರುವ ಹೇಳಿಕೆ ಅದು. ಸಿದ್ದರಾಮಯ್ಯನವರೇ, ನೀವು ಮುಖ್ಯಮಂತ್ರಿಗಳು, ಶಾಸಕರೊಬ್ಬರು ನೀವು 24 ಮರ್ಡರ್ ಮಾಡಿದ್ದೀರಿ ಅಂತ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ, ಶಾಸಕರು ಹೇಳಿದ ಮೇಲೆ ನಮಗೆ ಕೂಡ ಡೌಟ್ ಬರ್ತಿದೆ. ಹಾಗಾಗಿ ಒಂದೋ ಶಾಸಕನನ್ನು ಅಮಾನತು ಮಾಡಬೇಕು, ಇಲ್ಲವಾದರೆ, ನಿಮ್ಮ ತಲೆ ದಂಡವಾಗಬೇಕು ಎಂದು ಹೇಳಿದ್ದೆ ಅದರಲ್ಲಿ ಏನು ತಪ್ಪಿದೆ? ಎಂದು ಅವರು ಪ್ರಶ್ನಿಸಿದರು.
ಅವತ್ತು ಹರೀಶ್ ಪೂಂಜಾನವರ ಮೇಲೆ ಜಿ.ಪಂ. ಸದಸ್ಯರೊಬ್ಬರು ಕೇಸ್ ಮಾಡಿದ್ದಾಗ ಬಿಜೆಪಿಯವರು ಸತ್ತಿದ್ರಾ? ಉತ್ತರ ಕೊಡಬೇಕಲ್ವಾ? ಇದೇ ಹರೀಶ್ ಪೂಂಜಾ ವಿಧಾನ ಸಭೆಯೊಳಗೆ ಕೂತಿದ್ರಲ್ಲ, ಯಾಕೆ ಮಾತನಾಡುದಿಲ್ಲ? ಎಂದು ತಿಮರೋಡಿ ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD