ಪಿಕಪ್ ಜೀಪ್, ಕಾರ್, ಬೈಕ್ ನಡುವೆ ಭೀಕರ ಸರಣಿ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ

ಕೊಟ್ಟಿಗೆಹಾರ: ರಾಷ್ಟ್ರೀಯ ಹೆದ್ದಾರಿ 173ಯಲ್ಲಿ ಭೀಕರ ಸರಣಿ ಅಪಘಾತವಾಗಿದ್ದು, ಕಾರಿಗೆ ಗುದ್ದಿದ ರಭಸಕ್ಕೆ ಕಾರಿನ ಹಿಂದಿನ ಗ್ಲಾಸ್ ನಲ್ಲೇ ಬೈಕ್ ಸವಾರನ ಹೆಲ್ಮೆಟ್ ಸಿಕ್ಕಿ ಹಾಕಿಕೊಂಡಿದೆ.
ಘಟನೆಯಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪಿಕಪ್ ಜೀಪ್, ಕಾರ್, ಬೈಕ್ ನಡುವೆ ಭೀಕರ ಸರಣಿ ಅಪಘಾತವಾಗಿದೆ. ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ರವಾನಿಸಲಾಗಿದೆ. ಸರಣಿ ಅಪಘಾತದಿಂದ ಎನ್.ಎಚ್. 173 ನಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD